ಬೆಂಗಳೂರಿನ ಸರೋಜಿನಿ ದಾಮೋದರನ್ ಫೌಂಡೇಷನ್ ಕರೋನಾದ ಸಂಕಷ್ಟದ ಸಮಯದಲ್ಲಿ, ಯಕ್ಷಗಾನ ವೃತ್ತಿಪರ ಕಲಾವಿದರಿಗಾಗಿ ಒಂದು ಸಾವಿರ ರೂಪಾಯಿ ಮೊತ್ತದ ಆಹಾರ ಕಿಟ್ ಗಳನ್ನು ಮೊದಲ ಕಂತಾಗಿ ಕಳುಹಿಸಿದ್ದು, ಇದರಲ್ಲಿ ಮೊದಲ ಕಂತಿನ ಕಿಟ್ ನ್ನು ಕಾಸರಗೋಡಿನ ಯಕ್ಷಗಾನ ಕಲಾವಿದರಿಗೆ ನೀಡಲಾಗಿದೆ. ಇದರೊಂದಿಗೆ ಕಾಸರಗೋಡು ಕಲಾವಿದರಿಗೆ ಪಣಂಬೂರು ವಾಸುದೇವ ಐತಾಳರ ವತಿಯಿಂದ 5 ಕೆ.ಜಿ. ಸಾವಯವ ಕುಚ್ಚಲಕ್ಕಿ ವಿತರಿಸಲಾಗಿದೆ. ಉಳಿದ ಕಲಾವಿದರಿಗೆ ಮುಂದಿನ ದಿನಗಳಲ್ಲಿ ಕಿಟ್ ನೀಡಲಾಗುವುದು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ .
ಯಕ್ಷಗಾನ ಕಲಾರಂಗ (ರಿ.) ಉಡುಪಿ ಇವರ ಮುತುವರ್ಜಿಯಲ್ಲಿ ಸಂಗ್ರಹಿಸಿ ಆಹಾರ ಕಿಟ್ ನ್ನು ಗಡಿನಾಡು ಕಾಸರಗೋಡು ವಿಭಾಗಕ್ಕೆ ಪ್ರತಿಷ್ಠತ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಶ್ರೀ ಸತೀಶ ಅಡಪರ ಸಂಕಬೈಲು ಮತ್ತು ರಾಧಾಕೃಷ್ಣ ನಾವಡ ಮಧೂರು ಇವರ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ವೃತ್ತಿ ಕಲಾವಿದರಿಗೆ ವಿತರಿಸಲಾಯಿತು.


ಗಡಿನಾಡು ಕಾಸರಗೋಡಿನ ವೃತ್ತಿ ಕಲಾವಿದರ ಸಂಕಷ್ಟಷ್ಟವನ್ನೂ ಇತ್ತೀಚೆಗೆ ಕರ್ನಾಟಕ ಸರಕಾರದ ಗಮನಕ್ಕೆ ತಂದಿರುತ್ತೇವೆ. ಯಕ್ಷಗಾನ ಕಲಾಂಗ (ರಿ.) ಉಡುಪಿ ಇವರ ಆಹಾರ ಕಿಟ್ ಯೋಜನೆಗೆ ಸಂತೋಷವಾಗಿದೆ. ಹಾಗು ಗಡಿನಾಡಿನ ಎಲ್ಲಾ ಯಕ್ಷಗಾನ ಕಲಾವಿದರ ಧ್ವನಿಯಾಗಿ ಯಕ್ಷಗಾನ ಕಲಾರಂಗಕ್ಕೆ ವಿಶೇಷ ಧನ್ಯವಾದಗಳನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಸಲ್ಲಿಸಿದೆ.