Wednesday, December 18, 2024
Homeಸುದ್ದಿಯಕ್ಷಗಾನ ಕಲಾರಂಗದ “ಕಲಾಂತರಂಗ 2020” ಬಿಡುಗಡೆ

ಯಕ್ಷಗಾನ ಕಲಾರಂಗದ “ಕಲಾಂತರಂಗ 2020” ಬಿಡುಗಡೆ

ಯಕ್ಷಗಾನ ಕಲಾರಂಗದ ಒಂದು ವರ್ಷದ ಚಟುವಟಿಕೆಗಳ ಕುರಿತ ಅಪೂರ್ವ ಮಾಹಿತಿವುಳ್ಳ “ಕಲಾಂತರಂಗ 2020”ನ್ನು ನಿಟ್ಟೂರು ಪ್ರೌಢಶಾಲೆಯ ರಜತ ಸಭಾಭವನದಲ್ಲಿ ಎಪ್ರಿಲ್ 16, 2021ರಂದು ಕರ್ಣಾಟಕ ಬ್ಯಾಂಕಿನ ಆಡಳಿತ ನಿರ್ದೇಶಕರಾದ ಮಹಾಬಲೇಶ್ವರ ಎಂ.ಎಸ್. ಮತ್ತು ಶಾಸಕರಾದ ಕೆ. ರಘುಪತಿ ಭಟ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್. ಕಲಾರಂಗ ಎಲ್ಲಾ ಸಂಸ್ಥೆಗಳಿಗೂ ಮಾದರಿಯಾಗಿದ್ದು, ಕರ್ಣಾಟಕ ಬ್ಯಾಂಕ್‍ ಕಲಾರಂಗದ ಚಟುವಟಿಕೆಗಳಿಗೆ ತನ್ನಿಂದಾದ ನೆರವನ್ನು ನೀಡಲು ಸದಾ ಸಿದ್ಧವಿದೆ ಎಂದರು.

ಶಾಲಾ ಸಂಚಾಲಕರಾದ ಕೆ.ರಘುಪತಿ ಭಟ್‍ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಧ್ಯಕ ಎಂ. ಗಂಗಾಧರ ರಾವ್ ವಂದಿಸಿದರು. ಕಲಾರಂಗದ ನಿಕಟ ಪೂರ್ವಅಧ್ಯಕ್ಷ ಕೆ. ಗಣೇಶ್‍ ರಾವ್ , ಪಿ. ಸದಾಶಿವ ರಾವ್, ಕೋಶಾಧಿಕಾರಿ ಕೆ ಮನೋಹರ್, ಕಲಾರಂಗದ ಉಪಾಧ್ಯಕ್ಷ ವಿ.ಜಿ ಶೆಟ್ಟಿ, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ, ಹೆಚ್. ಎನ್. ಶೃಂಗೇಶ್ವರ, ಬಿ. ನಾರಾಯಣ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಜಿತ್‍ಕುಮಾರ್, ದಿನೇಶ್ ಪೂಜಾರಿ, ಅಶೋಕ್ ಎಂ, ಮತ್ತು ಮುಖ್ಯೋಪಾಧ್ಯಾಯಿನಿ ಶ್ರಿಮತಿ ಅನಸೂಯ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments