Saturday, January 18, 2025
Homeಯಕ್ಷಗಾನಅದ್ವಿತೀಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ - ಸಂಕ್ಷಿಪ್ತ ಮಾಹಿತಿ (Sri Koppate Mutha Gowda)

ಅದ್ವಿತೀಯ ಕಲಾವಿದ ಕೊಪ್ಪಾಟೆ ಮುತ್ತ ಗೌಡ – ಸಂಕ್ಷಿಪ್ತ ಮಾಹಿತಿ (Sri Koppate Mutha Gowda)

ಹೆಸರು: ಶ್ರೀ ಕೊಪ್ಪಾಟೆ ಮುತ್ತ ಗೌಡ  

ಜನನ:  1945

ಜನನ ಸ್ಥಳ:   ಕುಂದಾಪುರ ತಾಲೂಕು ಬೈಂದೂರು ಸಮೀಪದ ಕಾಲ್ತೋಡು

ಬೆಳೆದ ಊರು: ಕುಂದಾಪುರ ತಾಲೂಕು ಆಲೂರು ಗ್ರಾಮದ ಕೊಪ್ಪಾಟೆ     

ತಂದೆ: ಶ್ರೀ ಅಣ್ಣಪ್ಪ ಗೌಡ ತಾಯಿ: ಶ್ರೀಮತಿ ಅಕ್ಕಣಿ ಅಮ್ಮ 

ವಿದ್ಯಾಭ್ಯಾಸ: ಮೂರನೇ ತರಗತಿ 

ಯಕ್ಷಗಾನ ಗುರುಗಳು: ಗುರು ಶ್ರೀ ವೀರಭದ್ರ ನಾಯಕ್ 

ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಆ ಕಾಲದ ಪ್ರಸಿಧ್ಧ ವೇಷಧಾರಿಗಳಿಂದ 
ಅನುಭವ: ಬಡಗುತಿಟ್ಟು ರಂಗಸ್ಥಳದಲ್ಲಿ ಒಟ್ಟು 49 ವರ್ಷಗಳ ಕಾಲ ವೇಷಧಾರಿಯಾಗಿ ಮೆರೆದಿದ್ದರು. 21 ವರ್ಷ ಮಾರಣಕಟ್ಟೆ ಮೇಳ, ಇನ್ನುಳಿದಂತೆ ಸಾಲಿಗ್ರಾಮ, ಪೆರ್ಡೂರು, ಇಡಗುಂಜಿ, ಕಳವಾಡಿ, ಮಂದಾರ್ತಿ ಮತ್ತು ಸೌಕೂರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ ಅನುಭವ. 

ತಾಳಮದ್ದಳೆ ಕೂಟಗಳಲ್ಲಿ: ಪ್ರಸಿದ್ಧ ವೇಷಧಾರಿಯಾಗಿದ್ದುದು ಮಾತ್ರವಲ್ಲದೆ ಅಪ್ರತಿಮ ವಾಕ್ಪಟುವಾಗಿದ್ದ ಇವರು ತಾಳಮದ್ದಳೆ ಕೂಟಗಳಲ್ಲೂ ಭಾಗವಹಿಸುತ್ತಿದ್ದರು. ಕುಂದಾಪುರ ಪರಿಸರದಲ್ಲಿ ನಡೆಯುತ್ತಿದ್ದ ಹೆಚ್ಚಿನ ತಾಳಮದ್ದಳೆಗಳಲ್ಲಿ ಭಾಗವಹಿಸುತ್ತಿದ್ದರು. 

ನಿರ್ವಹಿಸಿದ ಪಾತ್ರಗಳು: ನಾಯಕ ಪ್ರತಿನಾಯಕ ಎರಡೂ ಪಾತ್ರಗಳಲ್ಲೂ ಮಿಂಚಿದರು. ಗದಾಯುದ್ಧದ ಕೌರವ ಮತ್ತು ಭೀಮ, ವಾಲೀ ವಧೆಯ ವಾಲಿ ಮತ್ತು ಸುಗ್ರೀವ, ಅಂಗದ ಸಂಧಾನದ ಅಂಗದ ಮತ್ತು ಪ್ರಹಸ್ತ, ಭೀಷ್ಮ ಮತ್ತು ಪರಶುರಾಮ, ರಾಮ ಮತ್ತು ರಾವಣ ಮೊದಲಾದ ಖಳ ಮತ್ತು ಸಾತ್ವಿಕ ಪಾತ್ರಗಳಲ್ಲೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದರು. ಅಲ್ಲದೆ ಅರ್ಜುನ, ಹನುಮಂತ, ಕೀಚಕ, ಶಲ್ಯ, ಅತಿಕಾಯ, ಇಂದ್ರಜಿತು, ವಿಭೀಷಣ, ಅಗ್ನಿ ಮೊದಲಾದ ಪಾತ್ರಗಳಲ್ಲಿ ಪ್ರಸಿದ್ಧರಾಗಿದ್ದರು. 

ರಚಿಸಿದ ಪ್ರಸಂಗಗಳು: ಪುಷ್ಕಳ ಪುನರ್ಜನ್ಮ, ಮಾರಿಕಾಂಬಾ ಮಹಾತ್ಮೆ, ನಂದಿಕೇಶ್ವರ ಮಹಾತ್ಮೆ, ಮಿತ್ರದ್ರೋಹ 
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಹಲವಾರು ಸನ್ಮಾನ ಪ್ರಶಸ್ತಿಗಳು ಅವರನ್ನು ಅರಸಿಕೊಂಡು ಬಂದಿವೆ.  ಅದರಲ್ಲಿ ಯಕ್ಷಗಾನ ಕಲಾರಂಗದ ಬೆಳ್ಳಿಹಬ್ಬ ಸನ್ಮಾನ, ಗೋರ್ಪಾಡಿ ವಿಠಲ ಪಾಟೀಲ ಪ್ರಶಸ್ತಿ, ಎಂ.ಎಂ.ಹೆಗಡೆ ಪ್ರಶಸ್ತಿ, ಕಲಾರತ್ನ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿ ಸನ್ಮಾನಗಳು. 

ನಿಧನ: 04.01.2020

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments