ವರ್ತಮಾನದ ಬೆಳಕಿನಲ್ಲಿ ಯಕ್ಷಗಾನದ ಮರುಚಿಂತನೆ – ಸಹಚಿಂತನೆ ಮತ್ತು ಸಂವಾದದ ಜೊತೆಗೆ ‘ಮ್ಯಾಕ್ ಬೆತ್’ ಯಕ್ಷರೂಪಕ ಕಾರ್ಯಕ್ರಮವು ಏಪ್ರಿಲ್ 10 ಶನಿವಾರದಂದು ಸಂತ ಅಲೋಸಿಯಸ್ ಕಾಲೇಜಿನ ಸಾನಿಧ್ಯ ಸಭಾಂಗಣದಲ್ಲಿ ನಡೆಯಲಿದೆ. ‘ಯಕ್ಷಗಾನ: ವರ್ತಮಾನದ ಬೆಳಕಿನಲ್ಲಿ ಮರುಚಿಂತನೆ’ ಎಂಬ ವಿಷಯದ ಬಗ್ಗೆ ವಿವಿಧ ವಿದ್ವಾಂಸರಿಂದ ವಿಚಾರಗೋಷ್ಠಿಗಳು ನಡೆದ ನಂತರ ಸಂಜೆ 6 ಘಂಟೆಗೆ ಸೂರಿಕುಮೇರಿ ಗೋವಿಂದ ಭಟ್ ವಿರಚಿತ ‘ಮ್ಯಾಕ್ ಬೆತ್’ ಎಂಬ ಯಕ್ಷರೂಪಕ ನಡೆಯಲಿದೆ. ಕಾರ್ಯಕ್ರಮದ ವಿವರ ಕೆಳಗೆ ಲಗತ್ತಿಸಲಾಗಿದೆ.

