ಯಕ್ಷಗಾನ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ಕರುನಾಡಲ್ಲಿ ಜನಪ್ರಿಯತೆಗೊಂಡ ಸಂಸ್ಥೆ ಡಾ. ರಾಧಾಕೃಷ್ಣ ಉರಾಳರ ನಿರ್ದೇಶಕತ್ವದ ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್. ಮಾಸದ ಮೆಲುಕು ಎಂಬ ಶಿರೋನಾಮೆಯಡಿಯಲ್ಲಿ 110 ಕ್ಕೂ ಹೆಚ್ಚು ತಿಂಗಳು ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದ ಹೆಗ್ಗಳಿಕೆ ಈ ಸಂಸ್ಥೆಯದು.
ಯಕ್ಷಗಾನ ಮಾತ್ರವಲ್ಲದೇ ರಂಗಭೂಮಿ, ಚಲನಚಿತ್ರ, ಸಂಗೀತ, ನೃತ್ಯ ಈ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಾ ಬಂದಿದೆ. ಅಲ್ಲದೆ ಹಲವಾರು ಸಾಮಾಜಿಕ ಕೆಲಸಗಳಲ್ಲೂ ಕೂಡ ಸಕ್ರಿಯವಾಗಿದೆ. ಮಹಾನಗರ ಪಾಲಿಕೆಯವರ ಸ್ವಚ್ಚತಾ ಆಂದೋಲನದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರದರ್ಶಿಸಿದ ‘ ಕಂಟಕೀ ಕಸಾಸುರ” ಎನ್ನುವ ಬೀದಿ ನಾಟಕ ಅಪಾರ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೇ ಪರಿಸರ ಪರ ಕಾಳಜಿಯನ್ನು ಜನರ ಮನಸಲ್ಲಿ ಬಿತ್ತುವಲ್ಲಿ ಯಶಸ್ವೀಯು ಆಯಿತು.
ಬೆಂಗಳೂರಿನ ಹೆಬ್ಬಾಳದ ಜೈನ್ ಹೆರಿಟೇಜ್ ಶಾಲೆ, ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯ, ಗಿರಿನಗರದ ಅರ್ಬನ್ ಕಲಾ ಸ್ಟುಡಿಯೋ ಹಾಗೂ ಉಲ್ಲಾಳ ಉಪನಗರದ ವಿಶ್ವೇಶ್ವರ ಬಡಾವಣೆಯ 4 ನೇ ವಿಭಾಗದ ಕಲಾಗುಡಿಯಲ್ಲಿ ಯಕ್ಷಗಾನ, ಸುಗಮ ಸಂಗೀತ, ರಂಗಭೂಮಿಯ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ.

ಇದೇ ಬರುವ 10-04-2021 ರ ಶನಿವಾರ ಸಂಜೆ 5-30 ರ ಹಾಗೆ ಉಲ್ಲಾಳ ಉಪನಗರದ ವಿಶ್ವೇಶ್ವರ ಬಡಾವಣೆಯ 4 ನೇ ವಿಭಾಗದ ಕಲಾಗುಡಿಯಲ್ಲಿ “ ಗುಡಿ ನಡೆ’ ಎಂಬ ಶೀರ್ಷಿಕೆಯಲ್ಲಿ ಮತ್ತೊಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಲೋಕಕ್ಕೆ ಕಲಾಕದಂಬ ಆರ್ಟ್ ಸೆಂಟರ್ ತನ್ನನ್ನು ತೆರೆದುಕೊಳ್ಳುತ್ತಿದೆ. ಇದರ ಸಲುವಾಗಿ ವೇಷಭೂಷಣಗಳಿಲ್ಲದೆ, ಕುಣಿತಗಳಿಲ್ಲದೇ ಹಿಮ್ಮೇಳ ಹಾಗೂ ಅರ್ಥಗಾರಿಕೆಯ ಮುಮ್ಮೇಳದ ಸಮ್ಮಿಳಿತಗಳಿಂದ ಕೂಡಿದ ಯಕ್ಷಗಾನದ ಇನ್ನೊಂದು ರೂಪ ತಾಳಮದ್ದಲೆಯನ್ನು ಆಯೋಜಿಸಿದ್ದು ಪ್ರಸಂಗ ಕರ್ತ್ರ ಶ್ರೀ ದೇವಿದಾಸರ “ಕರ್ಣ ಭೇದನ” ಎಂಬ ಕಥಾನಕವು ಪ್ರದರ್ಶನಗೊಳ್ಳಲಿದೆ.
ಈ ಒಂದು ತಾಳಮದ್ದಲೆಯ ವೈಶಿಷ್ಟ್ಯತೆ ಏನೆಂದರೆ ಯಕ್ಷಗಾನದ ಹಿಮ್ಮೇಳದವರೇ ಪಾತ್ರಧಾರಿಗಳಾಗಿ ಮಾತಿನ ಮನೆ ಕಟ್ಟುವ ಯಕ್ಷಗಾನ ಕ್ಷೇತ್ರದಲ್ಲೊಂದು ವಿಶಿಷ್ಟ ವಿನೂತನ ಪ್ರಯೋಗ ನಡೆಯಲಿದೆ. ಯಕ್ಷಗಾನ ಕಲಾವಿದರಾದ ದೇವರಾಜ ಕರಬರು ಈ ಕಾರ್ಯಕ್ರಮದ ಸಂಯೋಜಕರಾಗಿದ್ದು, ಇದರ ಪರಿಕಲ್ಪನೆ ಹಾಗೂ ನಿರ್ದೇಶನ ಡಾ. ರಾಧಾಕೃಷ್ಣ ಉರಾಳರದ್ದಾಗಿದೆ. ಭಾಗವಹಿಸಲಿರುವ ಕಲಾವಿದರು ವಿದ್ವಾನ್ ಎ.ಪಿ.ಪಾಠಕ್, ಸುಬ್ರಾಯ ಹೆಬ್ಬಾರ್,ಅಂಬರೀಷ್ ಭಟ್ ಹಾಗೂ ಪ್ರದೀಪ್ ಸಾಮಗ.
ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರಾದ ಶ್ರೀ ರವೀಂದ್ರ ಭಟ್, ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನದ ಶ್ರೀ ಜಯರಾಮ ಆಡಿಗ, ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ಸಂಜಯ ಸೂರಿ, ಹಾಗೂ ರಂಗಕರ್ಮಿ ಶ್ರೀ ಶಶಿಧರ ಭಾರಿಘಾಟ್ ಉಪಸ್ಥಿತರಿರಲಿದ್ದಾರೆ.
ಕರೋನದ ಮುನ್ನೆಚ್ಚರಿಕೆಯ ಮಾರ್ಗಸೂಚಿಗಳನ್ನು ಪಾಲಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- 9448510582, 9886066732