Saturday, January 18, 2025
Homeಯಕ್ಷಗಾನಯಕ್ಷಗಾನ ಕಲಾವಿದ ಸತೀಶ್ ಹೆಗಡೆಯವರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ನೆರವು

ಯಕ್ಷಗಾನ ಕಲಾವಿದ ಸತೀಶ್ ಹೆಗಡೆಯವರ ಕುಟುಂಬಕ್ಕೆ ಯಕ್ಷಗಾನ ಕಲಾರಂಗದಿಂದ ನೆರವು

35 ವರ್ಷಗಳ ಕಾಲ ವಿವಿಧ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿ, ಎರಡು ತಿಂಗಳ ಹಿಂದೆ ಅಕಾಲಿಕವಾಗಿ ನಿಧನರಾದ ಸತೀಶ್ ಹೆಗಡೆ, ಆನೆಗದ್ದೆ ಯವರ ಪತ್ನಿ ಶ್ರೀಮತಿ ಸಂಧ್ಯಾ ಇವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ರೂ. 50,000/- ಮೊತ್ತದ ನೆರವನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚದಲ್ಲಿರುವ ಅವರ ಮನೆಯಲ್ಲಿ ಬಾಳಗಾರು ಮಠಾಧೀಶರಾದ ಶ್ರೀ ಶ್ರೀ ರಘುಭೂಷಣತೀರ್ಥ ಶ್ರೀಪಾದರು ನೀಡಿ ಸಾಂತ್ವನದ ಮಾತುಗಳನ್ನಾಡಿ ಹರಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಉಪಾಧ್ಯಕ್ಷ ಎಸ್.ವಿ ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಸತೀಶ್ ಹೆಗಡೆಯವರ ಕುಟುಂಬಕ್ಕೆ ಧೈರ್ಯದ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಅವರ ಪುತ್ರ ಸುದರ್ಶನ ಎಸ್ ಮತ್ತು ಪುತ್ರಿ ಸಿಂಚನಾ ಎಸ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments