ಗೆಳೆಯರ ಬಳಗ.ಕಾರ್ಕಡ-ಸಾಲಿಗ್ರಾಮ ಇವರ 33 ನೆಯ ವಾರ್ಷಿಕೋತ್ಸವ ಸಂದರ್ಭ ಮೌನ ಸಾಧಕ ಯಕ್ಷಗಾನ , ನಾಟಕ ಕಲಾವಿದ, ಕವಿ, ಗಾಯಕ, ಸಂಘಟಕ. ಸಂಪಾದಕ, ಹಂದಟ್ಟು ಕೋಟ ಜನಾರ್ದನ ಹಂದೆಯವರನ್ನು ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಅವರ ಗಣನೀಯ ಸೇವೆಯನ್ನು ಗಮನಿಸಿ ಗೌರವ ಧನ ನೀಡಿ ಸಮ್ಮಾನಿಸಲಾಯಿತು.
ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪ್ರದೀಪ ಕುಮಾರ ಕಲ್ಕೂರ, ನೀಲಾವರ ಸುರೇಂದ್ರ ಅಡಿಗ, ಆನಂದ , ಸುಜಾತ ಹೆಗಡೆ, ಜಗದೀಶ ನಾವಡ, ಮೊದಲಾದ ಅನೇಕ ಗಣ್ಯರು ಸುಂದರ ಸಮಾರಂಭದಲ್ಲಿ ಭಾಗವಹಿಸಿ ಸಾಕ್ಷಿಯಾದರು.