ವಿಶ್ವ ರಂಗಭೂಮಿಯ ದಿನದ ಪ್ರಯುಕ್ತ, ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿಶ್ವ ರಂಗಭೂಮಿಯ ದಿನದ ಅಂಗವಾಗಿ ಮಾರ್ಚ್ 28ರಂದು ಯಕ್ಷ ಕಲಾ ಅಕಾಡೆಮಿಯ ಆವರಣದಲ್ಲಿ “ವಾಲಿ ವಧೆ ” ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆಯನ್ನು ಸಂಸ್ಥೆಯ ಕಲಾವಿದರು ನಡೆಯಿಸಿ ಕೊಡಲಿದ್ದಾರೆ.
ಭಾಗವತಿಕೆಯಲ್ಲಿ, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೋಟ ಕೃಷ್ಣ ಮೂರ್ತಿ ತುಂಗ, ಹಾಗೂ ಕುಮಾರಿ ಚಿತ್ಕಲಾ ಕೆ. ತುಂಗ, ಮದ್ದಳೆಯಲ್ಲಿ ರಾಘು ಶರ್ಮಾ, ಮುಮ್ಮೇಳದಲ್ಲಿ, ರವಿ ಮಡೋಡಿ, ಮನೋಜ್ ಭಟ್, ಆದಿತ್ಯ ಉಡುಪ, ಶಶಾಂಕ್ ಕಾಶಿ, ಸುಹಾಸ ಕರಬ, ಪ್ರದೀಪ ಮಧ್ಯಸ್ಥ, ಆದಿತ್ಯ ಹೊಳ್ಳ, ಸದಾಶಿವ ತುಂಗ, ಶ್ರೀ ನಿಧಿ ಎಂ.ಎಸ್., ವಾಸುದೇವ, ಶ್ರೀಮತಿ ಅರ್ಚನಾ, ಶ್ರೀಮತಿ ಚೇತನಾರವರು ಭಾಗವಹಿಸಲಿದ್ದಾರೆ ಎಂದು ಯಕ್ಷ ಕಲಾ ಅಕಾಡೆಮಿಯ ಕಾರ್ಯದರ್ಶಿ ಕೆ.ಅನಸೂಯಾರವರು ತಿಳಿಸಿದ್ದಾರೆ.
ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
- ಅಂಬಿಕಾ ವಿದ್ಯಾಲಯದ ನಿಹಾರಿಕಾಗೆ ಬಹುಮಾನ
- ತನ್ನದೇ ನವಜಾತ ಶಿಶುವನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ಯತ್ನ – ಆಸ್ಪತ್ರೆಯಿಂದಲೇ ಯುವತಿಯ ಬಂಧನ
- ಜಾಮೀನಿನ ಮೇಲೆ ಹೊರಬಂದ ಕೊಲೆ ಆರೋಪಿಯು ತನ್ನ ಪತ್ನಿ, 3 ಮಕ್ಕಳನ್ನು ಕೊಂದ ನಂತರ ತಾನು ಆತ್ಮಹತ್ಯೆ
- ‘ಯಕ್ಷಗಾನ ಕಲಾರಂಗ ಪ್ರಶಸ್ತಿ-2024’ ಪ್ರಕಟ
- ಹೊಸ ಆಟೋರಿಕ್ಷಾ ಗೆಲ್ಲುವುದಕ್ಕಾಗಿ ಬೆಟ್ಟಿಂಗ್ ಕಟ್ಟಿದ ಸ್ನೇಹಿತರು – ಸ್ಪೋಟಕ ಪೆಟ್ಟಿಗೆಯ ಮೇಲೆ ಕುಳಿತ ಯುವಕ ಪಟಾಕಿ ಸ್ಪೋಟಗೊಂಡು ಸಾವು