Saturday, January 18, 2025
Homeಪುಸ್ತಕ ಮಳಿಗೆ'ಕುತ್ಯಾಳ ಸಂಪದ'  ಆಕರ ಗ್ರಂಥದ ಎರಡನೇ ಸಂಪುಟ ಬಿಡುಗಡೆ

‘ಕುತ್ಯಾಳ ಸಂಪದ’  ಆಕರ ಗ್ರಂಥದ ಎರಡನೇ ಸಂಪುಟ ಬಿಡುಗಡೆ

‘ಕುತ್ಯಾಳ ಸಂಪದ ಎಂಬ  ಕೃತಿಯು ಯಕ್ಷಗಾನ ಸಂಗೀತ, ಚಿತ್ರಕಲೆಗಳಿಗೆ ಕೊಡುಗೆಗಳನ್ನು ನೀಡಿದ ಕೂಡ್ಲು ಶ್ಯಾನುಭಾಗ ಮನೆತನದ ಆಕರ ಗ್ರಂಥವಾಗಿ 1997ರಲ್ಲಿ  ಪ್ರಕಟವಾಗಿತ್ತು. ಇದೀಗ ಅದರ ಎರಡನೆಯ ಭಾಗ ಪ್ರಕಟವಾಗಿದೆ.

ಇತ್ತೀಚಿಗೆ ‘ಕುತ್ಯಾಳ ಸಂಪದ’ ಆಕರ ಗ್ರಂಥದ ಎರಡನೇ ಸಂಪುಟವನ್ನು ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.   ಧರ್ಮದರ್ಶಿ ಹರಿಕೃಷ್ಣ ಪುನರೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃತಿಯ ಮೊದಲ ಪ್ರತಿಯನ್ನು ಸ್ವಾಮೀಜಿಯವರು ಹಿರಿಯ ಸಂಗೀತ ವಿದ್ವಾನ್ ಬಾಬು ರೈಯವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ರಾಧಾಕೃಷ್ಣ ಬೆಳ್ಳೂರು ಅವರು ಕೃತಿಯ ಸ್ಥೂಲ ಪರಿಚಯ ಮಾಡಿಕೊಟ್ಟರು. ಸಾಹಿತಿ ಮಲಾರ್ ಜಯರಾಮ ರೈ, ಕುತ್ಯಾಳ  ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಿ ಶ್ಯಾನುಭೋಗ್ ಮುಖ್ಯ ಅತಿಥಿಗಳಾಗಿದ್ದರು.

ಕುತ್ಯಾಳ ಸಂಪದ ಪ್ರಥಮ ಸಂಪುಟದ ಸಂಪಾದಕ ರಾಧಾಕೃಷ್ಣ ಉಳಿಯತ್ತಡ್ಕ ಪ್ರಸ್ತಾವನಾ ಭಾಷಣ ಮಾಡಿದರು. ಪ್ರಾರಂಭದಲ್ಲಿ ಸ್ವಾಮೀಜಿಯವರನ್ನು ಪ್ರಸನ್ನ ಶಾನುಭೋಗ್ ಮತ್ತು ಶ್ರೀಮತಿ ವೀಣಾ ಪ್ರಸನ್ನ ಹೂ ಹಾರ ಹಾಕಿ ಫಲ ಪುಷ್ಪ ನೀಡಿ ಸ್ವಾಗತಿಸಿದರು. ಹಿರಿಯ ಸಂಗೀತ ವಿದ್ವಾಂಸ, ಮೃದಂಗ ವಿದ್ವಾನ್ ಬಾಬು ರೈ ಅವರನ್ನು ಸ್ವಾಮೀಜಿಗಳು ಆಶೀರ್ವದಿಸಿ ಸನ್ಮಾನಿಸಿದರು.

ಕುತ್ಯಾಳ ಸಂಪದ ಕೃತಿಯ ಸಂಪಾದಕ ವಿಷ್ಣು ಶಾನಭೋಗ್ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ವೀಣಾ ಪ್ರಸನ್ನ ವಂದಿಸಿದರು. 

ಈ ಕೃತಿಯ ಮಾರಾಟದಿಂದ ಸಂಗ್ರಹವಾದ ಮೊತ್ತವನ್ನು ಮನೆಯಿಲ್ಲದ ಬಡವರೊಬ್ಬರಿಗೆ ಮನೆ ನಿರ್ಮಿಸಲು ನೀಡಲಾಗುವುದು ಎಂದು ಪುಸ್ತಕದ ಸಂಪಾದಕ ವಿಷ್ಣು ಶಾನಭೋಗ್ ಈ ಸಂದರ್ಭದಲ್ಲಿ ತಿಳಿಸಿದರು. ಈ ಪುಸ್ತಕದ ಮುಖಬೆಲೆ ರೂ. 500/- 

ಪುಸ್ತಕದ ಸಂಪಾದಕರ ವಿವರ: ವಿಷ್ಣು ಶಾನುಭೋಗ್, ಫೋನ್: 9446772355

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments