ಪ್ರಮುಖ ಬೆಳವಣಿಗೆಯೊಂದರಲ್ಲಿ, ಚಿನ್ನದ ಕಳ್ಳಸಾಗಣೆ ಹಗರಣದ ಆರೋಪಿ ಸ್ವಪ್ನಾ ಸುರೇಶ್ ಅವರಿಂದ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ದಾಖಲಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧವೇ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದು ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರದೊಂದಿಗೆ ಕೇರಳ ರಾಜ್ಯ ಸರಕಾರದ ಪ್ರಮುಖ ಮುಖಾಮುಖಿಯಾಗಿದೆ.
ಅಪರಾಧ ವಿಭಾಗವು 120-ಬಿ (ಕ್ರಿಮಿನಲ್ ಪಿತೂರಿ), 167 (ಸಾರ್ವಜನಿಕ ಸೇವೆಯಲ್ಲಿರುವವರಿಗೆ ಘಾಸಿಯುಂಟುಮಾಡುವ ಉದ್ದೇಶದಿಂದ ತಪ್ಪಾದ ದಾಖಲೆಯನ್ನು ರೂಪಿಸುವುದು), 192 (ಸುಳ್ಳು ಸಾಕ್ಷ್ಯಗಳನ್ನು ತಯಾರಿಸುವುದು), 195-ಎ (ಯಾವುದೇ ವ್ಯಕ್ತಿಗೆ ಸುಳ್ಳು ಸಾಕ್ಷ್ಯಗಳನ್ನು ನೀಡುವಂತೆ ಬೆದರಿಕೆ ಹಾಕಿದ್ದಾನೆ) ಅಡಿಯಲ್ಲಿ ಕೇರಳ ಪೋಲಿಸರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದೆ.