ಜಮೈಕಾಕ್ಕೆ ಭಾರತವು COVID-19 ಲಸಿಕೆ ಉಡುಗೊರೆ ನೀಡಿದೆ. ಈ ಸಂಬಂಧ ಮೋದಿಗೆ ವೆಸ್ಟ್ ಇಂಡೀಸಿನ ಖ್ಯಾತ ಕ್ರಿಕೆಟ್ ಆಟಗಾರ ಕ್ರಿಸ್ ಗೇಲ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ
ಇಂಡೀಸ್ ಕ್ರಿಕೆಟಿಗ ಮತ್ತು ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್ ಅವರು ಜಮೈಕಾಗೆ COVID-19 ಲಸಿಕೆಗಳನ್ನು ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶುಕ್ರವಾರ ಕೃತಜ್ಞತೆ ಸಲ್ಲಿಸಿದರು. ಮಾರ್ಚ್ 11 ರಂದು ಕೆರಿಬಿಯನ್ ಪ್ರದೇಶಕ್ಕೆ ಭಾರತದಿಂದ 20,000 ಡೋಸ್ ಕರೋನವೈರಸ್ ಲಸಿಕೆಗಳು ತಲುಪಿತು,
ಜಮೈಕಾದ ಭಾರತ ಹೈಕಮಿಷನ್ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕ್ರಿಸ್ ಗೇಲ್ ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೆರಿಬಿಯನ್ ಪ್ರದೇಶಕ್ಕೆ ಲಸಿಕೆಗಳ ಮೂಲಕ ಸಹಾಯವನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಈ ಹಿಂದೆ, ಸರ್ ವಿವಿಯನ್ ರಿಚರ್ಡ್ಸ್ ಸೇರಿದಂತೆ ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗರು ಲಸಿಕೆಗಳನ್ನು ನೀಡುವ ಮೆಗಾ ಉಪಕ್ರಮದ ಮೂಲಕ ಕೆರಿಬಿಯನ್ ಪ್ರದೇಶಕ್ಕೆ ಸಹಾಯ ಮಾಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು. ಸರ್ ರಿಚರ್ಡ್ಸ್ ಆಂಟಿಗುವಾ ಮತ್ತು ಬಾರ್ಬುಡಾದ ಜನರ ಪರವಾಗಿ ‘ಮೇಡ್ ಇನ್ ಇಂಡಿಯಾ’ ಲಸಿಕೆಗಳ ಅದ್ಭುತ ಕೊಡುಗೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು.