‘ಶ್ರೀ ದುರ್ಗಾ ಸೇವಾ ಸಂಘ ಕನ್ಯಾನ’ ಇವರ ವತಿಯಿಂದ 18.03.2021ನೇ ಗುರುವಾರ ಕನ್ಯಾನದ ಶ್ರೀ ಸರಸ್ವತಿ ವಿದ್ಯಾಲಯದ ವಠಾರದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಕಲಾ ಮಂಡಳಿಯವರಿಂದ ರಾತ್ರಿ 9.30ಕ್ಕೆ ಸರಿಯಾಗಿ ‘ಭಕ್ತ ಸುಧನ್ವ ಮತ್ತು ಭಾರ್ಗವ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ರಾತ್ರಿ 8.30 ಘಂಟೆಗೆ ಚೌಕಿ ಪೂಜೆ ಮತ್ತು ಆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
