ಭಾರತದ ಸಂಸ್ಕೃತಿ ಎಂಬುದು ವಿದೇಶಿಯರಿಗೆ ಅದ್ಭುತ, ಸೋಜಿಗಗಳ ವಿಚಾರ. ಭಾರತದ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ವಿವಿಧ ಕಲೆಗಳ ಬಗ್ಗೆ ವಿದೇಶಿಯರು ಕುತೂಹಲದ ದೃಷ್ಟಿ ಬೀರುತ್ತಿರುವುದು ಇಂದು ನಿನ್ನೆಯ ವಿಚಾರವೇನಲ್ಲ. ಭಾರತದ ಅನೇಕ ಕಲಾಪ್ರಾಕಾರಗಳನ್ನು ಅಭ್ಯಸಿಸಿ ಅದರಲ್ಲಿ ಭಾರತೀಯರಿಗಿಂತಲೂ ಹೆಚ್ಚಿನ ನೈಪುಣ್ಯವನ್ನು, ಸಾಧನೆಯನ್ನು ಪ್ರದರ್ಶಿಸಿದ್ದರೇನೋ ಎಂಬ ಸಂಶಯವನ್ನು ತಾಳುವಂತೆ ಮಾಡಿದ ವಿದೇಶಿಯರು ಹಲವಾರು ಮಂದಿ ಇದ್ದಾರೆ.
ಸಂಗೀತ, ಭರತನಾಟ್ಯ, ಉತ್ತರ ಭಾರತದ ವಿವಿಧ ನತ್ಯಪ್ರಾಕಾರಗಳು, ಕಥಕ್ಕಳಿ, ಕೂಚುಪುಡಿ, ಒಡಿಸ್ಸಿ, ಹೀಗೆ ಹಲವಾರು ಕಲೆಗಳನ್ನು ವಿದೇಶಿಯರು ಅಭ್ಯಸಿಸಿ ಸಾಧನೆ ಮಾಡಿದ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಯಕ್ಷಗಾನವನ್ನು ಕೂಡಾ ಹಲವಾರು ವಿದೇಶಿಯರು ಕಲಿತಿದ್ದಾರೆ. ಅದರ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದಾರೆ. ಈ ವೀಡಿಯೋದಲ್ಲಿ ವಿದೇಶಿ ಕಲಾವಿದರು ಭರತನಾಟ್ಯ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.
1.07.2017ರಂದು ರಿಗಾ ರಥಯಾತ್ರೆಯ ಸಂದರ್ಭದಲ್ಲಿ (ಲಾಟ್ವಿಯಾ), ಗೌರಾ ನಟರಾಜ್ ದಾಸ್ (ಅಲೆಕ್ಸ್ ಫರ್ಡಾಕ್) ಮತ್ತು ಪದ್ಮಿನಿ ಶ್ರೀದೇವಿ (ಲಾರಿಸಾ ಪೊಡ್ಸ್ಕೋಚಾಯಾ) ಅವರು ಥಿಲ್ಲಾನಾ ಬೃಂದಾವನಿ ಪ್ರದರ್ಶನ ನೀಡಿದರು. ಶ್ರೀಮತಿ ನರ್ಮದಾ ಅವರ ನೃತ್ಯ ಸಂಯೋಜನೆ.
- ತಾನು ಮದುವೆಯಾಗುವ ಹುಡುಗಿಗೆ ಮೂರು ಷರತ್ತುಗಳನ್ನು ವಿಧಿಸಿದ್ದ ಎ.ಆರ್. ರೆಹಮಾನ್: ಮದುವೆಯ ಮೂವತ್ತನೆಯ ವಾರ್ಷಿಕೋತ್ಸವ (ಗ್ರ್ಯಾಂಡ್ ಥರ್ಟಿ) ತಲುಪುವ ಭರವಸೆ ಹುಸಿಯಾಯಿತು ಎಂದ ಸಂಗೀತ ನಿರ್ದೇಶಕ
- ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – 20 ವರ್ಷದ ಯುವತಿ ಬೆಂಕಿಗೆ ಸಿಲುಕಿ ಸಾವು
- ಕಾಸರಗೋಡಿನ ಮಸೀದಿ ಪರಿಸರದ ಮಣ್ಣು ತೆಗೆದ ಜೆಸಿಬಿಗೆ 45 ಲಕ್ಷ ದಂಡ; ಬಡ ಕುಟುಂಬ ಸಂಕಷ್ಟದಲ್ಲಿ – ಕಬ್ರಿಸ್ತಾನ್ ಭೂಮಿಯ ಉಸ್ತುವಾರಿ ಮಸೀದಿ ಅಧಿಕಾರಿಗಳಿಗೆ ಶಿಕ್ಷೆ ಇಲ್ಲ
- ಶ್ರೀಧರ ಪಾಂಡಿ ಸಂಸ್ಮರಣಾ ಪ್ರಶಸ್ತಿ ಪ್ರದಾನ – ಭೀಷ್ಮ ವಿಜಯ ತಾಳಮದ್ದಳೆ