Friday, September 20, 2024
Homeಯಕ್ಷಗಾನಬೆಂಗಳೂರಿನಲ್ಲಿ ಪುಣ್ಯಕೋಟಿ ಯಕ್ಷನೃತ್ಯ ರೂಪಕ

ಬೆಂಗಳೂರಿನಲ್ಲಿ ಪುಣ್ಯಕೋಟಿ ಯಕ್ಷನೃತ್ಯ ರೂಪಕ

ಬೆಂಗಳೂರಿನ ಹೆಚ್ ಎಮ್ ವಿ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಚೇತನ ರವರು ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯು ಬೆಂಗಳೂರಿನ ಉಲ್ಲಾಳ ಉಪನಗರದ ವಿಶ್ವೇಶ್ವರಯ್ಯ ಬಡಾವಣೆಯ 4 ನೇ ಹಂತದಲ್ಲಿ ಇರುವ ಕಲಾಗುಡಿಯ ಕಲಾವೇದಿಕೆಯಲ್ಲಿ ದಿನಾಂಕ 08-03-2021 ರ ಸಂಜೆ ಹಮ್ಮಿಕೊಂಡ ಮಹಿಳಾ ದಿನಾಚರಣೆಯ ಸಂದರ್ಭ ಪ್ರದರ್ಶಿಸಿದ ಪುಣ್ಯಕೋಟಿ ಯಕ್ಷನೃತ್ಯ ರೂಪಕದ ಪ್ರಸ್ತುತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಮತ್ತೊಬ್ಬ ಅತಿಥಿಯಾಗಿದ್ದ ಖ್ಯಾತ ರಂಗ ನಿರ್ದೇಶಕಿ ಹಾಗೂ ಚಲನಚಿತ್ರ ನಿರ್ದೇಶಕಿಯಾದ ಚಂಪಾಶೆಟ್ಟಿಯವರು ಪುಣ್ಯಕೋಟಿ ಕಥೆಯ ಮಹತ್ವವನ್ನು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಅನುರಾಧ ಕರಬ, ಮಮತ ಉರಾಳ ಹಾಗೂ ರಮಾದೇವಿ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು ಕಲಾಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರು ಆದ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಕಲಾಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಪುಣ್ಯಕೋಟಿ ಯಕ್ಷ ನೃತ್ಯ ರೂಪಕವು ಅತಿಥಿಗಳ ಹಾಗೂ ನೆರೆದ ಪ್ರೇಕ್ಷಕರ ಪ್ರಶಂಸೆಗೆ ಪ್ರಾಪ್ತವಾಯಿತು.

ಪುಣ್ಯಕೋಟಿಯಾಗಿ ಅಧಿತಿ ಉರಾಳ, ಕರುವಾಗಿ ಪ್ರಶಸ್ತಿ, ಹುಲಿಯಾಗಿ ಮಧುಮಿತ ಹಾಗೂ ಗೊಲ್ಲರಾಗಿ ನಿತ್ಯಾ ಹಾಗೂ ನಿಶ್ಚಿತ ತಮ್ಮ ಕುಣಿತ ಹಾಗೂ ಅಭಿನಯದ ಮೂಲಕ ಎಲ್ಲರ ಮನಸೂರೆಗೊಂಡರು. ಕಾರ್ಯಕ್ರಮದ ನಿರೂಪಣೆಯನ್ನು ರಿಷಿ ಕುಮಾರ್ ನಿರ್ವಹಿಸಿದನು. ಸುಹಾಸ್, ಚಿರಾಗ್, ತೇಜಸ್ ತಮ್ಮ ಸಹಕಾರದ ಮೂಲಕ ಈ ಒಂದು ಮಹಿಳಾ ದಿನಾಚರಣೆಯ ಕಾರ್ಯಕ್ರಮ ಯಶಸ್ವೀಯಾಗಲು ಕಾರಣರಾದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments