ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ದಿ-07/3/2021 ರವಿವಾರದಂದು ನಾಟ್ಯಸಂಪದ (ರಿ.) ಸಂಸ್ಥೆಯ ಯಕ್ಷಗಾನ ತರಗತಿಗಳ ಸಮಾರೋಪವು ಪದ್ಮನಾಭನಗರದ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ನಡೆಯಿತು.
ಸಹಗುರುಗಳಾದ ಶ್ರೀ ಶಾಶ್ವತ ಹೆಗಡೆ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಶ್ರೀನಿವಾಸ ಸಾಸ್ತಾನ ಇವರು ಅಧ್ಯಕ್ಷೀಯ ನುಡಿಗಳಲ್ಲಿ ಜೀವನದ ಉನ್ನತಿಗೆ ಕಲೆಯೆ ಆಧಾರ, ಕಲೆ ಜೀವನದ ಭಾಗವಾಗಿರಬೇಕು. ಶ್ರದ್ಧೆಯಿಂದಕಲಿತರೆ ಸಾಧನೆ ಸಾಧ್ಯ, ಕಲಿತ ಕಲೆಯನ್ನು ಇನ್ನೂ ಮುಂದುವರಿಸಿಕೊಂಡು ಹೋಗಬೇಕು ಎಂದರು.


ಮುಖ್ಯ ಅತಿಥಿಗಳಾದ ಶ್ರೀ ನಾಗರಾಜ ಹೆಗಡೆಯವರು ಯಕ್ಷಗಾನ ಕಲಿಸುವಿಕೆಯ ಹಿಂದಿನ ಶ್ರಮದ ಬಗ್ಗೆ ವಿವರಿಸಿದರು. ಶ್ರೀ ರವೀಶ ಹೆಗಡೆ ವಂದಿಸಿದರು. ಕುಮಾರ ಶಿವರಾಮ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳು ವೃಷಸೇನ ಕಾಳಗ ಎಂಬ ಆಖ್ಯಾನವನ್ನು ಪ್ರದರ್ಶಿಸಿದರು.