ಹರೆಯ ಜಾರಿದಂತೆ ಮಾನವನ ದೇಹದ ಶಕ್ತಿ ಕ್ಷೀಣವಾಗುತ್ತಾ ಬರುತ್ತದೆ. ಶಕ್ತಿ ಕಡಿಮೆಯಾದಾಗ ಮಾಡುವ ಕೆಲಸಗಳಿಗೂ ವಿರಾಮ ನೀಡಬೇಕಾಗುತ್ತದೆ.
ಕೆಲಸಗಳಿಲ್ಲದಾಗ ಸಮಯ ಕಳೆಯಲು ಏನು ಮಾಡುವುದು? ಮಾಡಲು ಕೆಲಸವಿಲ್ಲದೇ ಸಮಯ ಕಳೆಯುವುದು ದುಸ್ತರವೆನಿಸಿ ಮಾನಸಿಕ ಚಿಂತೆ ಆರಂಭವಾಗಬಹುದು. ಆದುದರಿಂದಲೇ ವಯಸ್ಸಾದವರಲ್ಲಿ ಖಿನ್ನತೆ ತುಂಬಾ ಸಾಮಾನ್ಯವಾಗಿದೆ.
ವಯಸ್ಸಾದವರಲ್ಲಿ ಖಿನ್ನತೆಯು ವಿಲಕ್ಷಣ ರೀತಿಯಲ್ಲಿ ಕಂಡುಬರುತ್ತದೆ ಎಂದು ಹೇಳಲಾಗುತ್ತದೆ. ಅವರು ನೋವು , ಕಿರಿಕಿರಿ, ನೆನಪಿನ ಶಕ್ತಿ ಕ್ಷೀಣಿಸುವಿಕೆ ಕೆಲಸ ಮತ್ತು ಆಲೋಚನೆಯಲ್ಲಿ ನಿಧಾನತೆಯನ್ನು ಹೊಂದಿರಬಹುದು.
ಹಾಗಾದರೆ ಈ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವುದು ಹೇಗೆ? ಮತ್ತು ಅವುಗಳನ್ನು ವೈದ್ಯರಿಗೆ ತಿಳಿಸುವುದು ಅಗತ್ಯವೇ? ಈ ಸ್ಥಿತಿಗೆ ಚಿಕಿತ್ಸೆ ಲಭ್ಯವೇ? ಎಂಬೆಲ್ಲಾ ಮಾಹಿತಿಗಳಿಗೆ ಈ ವೀಡಿಯೋ ನೋಡಿ.
ಈ ಎಲ್ಲ ವಿಚಾರಗಳ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ ಈ ವೀಡಿಯೋದಲ್ಲಿ ವಿವರಿಸಿದ್ದಾರೆ. ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಮುಖ್ಯ ಪ್ರಬಂಧಕರಾದ ವಿ.ಎಸ್. ವೆಂಕಟಕೃಷ್ಣ ಈ ವೀಡಿಯೋದಲ್ಲಿ ಲವಲವಿಕೆಯಿಂದ ಅಭಿನಯಿಸಿದ್ದಾರೆ.