ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಷಷ್ಠ್ಯಬ್ಧಿ ಪ್ರಯುಕ್ತ ಮಂಗಳೂರು ಸಮಿತಿ ವತಿಯಿಂದ ಸಪ್ತ ಕಾರ್ಯಕ್ರಮಗಳ ಆರಂಭೋತ್ಸವವನ್ನು ಮಂಗಳಾದೇವಿ ದೇವಸ್ಥಾನದ ಕಲಾಮಂಟಪದಲ್ಲಿ ಏರ್ಪಡಿಸಲಾಗಿತ್ತು.
ಈ ಸಂದರ್ಭ ಯಕ್ಷಾಂಗಣ ಮಂಗಳೂರು ಸಂಯೋಜನೆಯಲ್ಲಿ ‘ಶ್ರೀರಾಮ – ಹನುಮ’ ಯಕ್ಷಗಾನ ತಾಳಮದ್ದಳೆ ಜರಗಿತು.
ಹಿಮ್ಮೇಳದಲ್ಲಿ ಭವ್ಯಶ್ರೀ ಕುಲ್ಕುಂದ (ಭಾಗವತರು), ಕೃಷ್ಣ ಪ್ರಕಾಶ್ ಉಳಿತ್ತಾಯ (ಮೃದಂಗ), ಮಯೂರ್ ನಾಯಗ (ಚೆಂಡೆ) ಭಾಗವಹಿಸಿದ್ದರು.
ಅರ್ಥಧಾರಿಗಳಾಗಿ ಡಾ.ಎಂ. ಪ್ರಭಾಕರ ಜೋಶಿ (ಹನುಮಂತ), ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀರಾಮ), ಜಬ್ಬಾರ್ ಸಮೋ ಸಂಪಾಜೆ (ಸುಗ್ರೀವ), ಕದ್ರಿ ನವನೀತ ಶೆಟ್ಟಿ (ವಿಶ್ವಾಮಿತ್ರ), ಡಾ.ದಿನಕರ ಎಸ್.ಪಚ್ಚನಾಡಿ (ಸೀತೆ), ಉಮೇಶ ಆಚಾರ್ಯ ಗೇರುಕಟ್ಟೆ (ನಾರದ) ಪಾಲ್ಗೊಂಡರು.
ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳಕುಮಾರ್ ಕಲಾವಿದರನ್ನು ಪರಿಚಯಿಸಿದರು. ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು.