ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಇವರು ನೀಡುತ್ತಿರುವ 2021ನೆಯ ಸಾಲಿನ “ಅಕಾಡೆಮಿ ಬಾಲ ಗೌರವ ಪ್ರಶಸ್ತಿ”ಗೆ ಯಕ್ಷಗಾನದ ಉದಯೋನ್ಮುಖ ಪ್ರತಿಭೆ, ಬಾಲ ಕಲಾವಿದ ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಆಯ್ಕೆಯಾಗಿದ್ದಾರೆ.
ಗಡಿನಾಡು ವಿಭಾಗದ ಬಹುಮುಖ ಪ್ರತಿಭೆ ಎಂಬ ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಮೀಪದ ಪಳ್ಳತ್ತಡ್ಕದ ಸ್ವಸ್ತಿಕ್ ಶರ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ 28ರಂದು ಧಾರವಾಡದ ಡಾ. ಮಲ್ಲಿಕಾರ್ಜುನ ಮುನ್ಸೂರ್ ಕಲಾಭವನದಲ್ಲಿ ನಡೆಯಲಿದೆ.
ಅತಿ ಸಣ್ಣ ವಯಸ್ಸಿನಲ್ಲಿಯೇ ಯಕ್ಷಗಾನದಲ್ಲಿ ಸಾಧನೆ ಮಾಡುವತ್ತ ದಾಪುಗಾಲು ಹಾಕುತ್ತಿರುವ ಸ್ವಸ್ತಿಕ್ ಶರ್ಮಾ ಇದುವರೆಗೆ ಸುಮಾರು 500ಕ್ಕಿಂತಲೂ ಅಧಿಕ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.
ಪಳ್ಳತ್ತಡ್ಕ ಕೇಶವ ಶರ್ಮ ಮತ್ತು ದಿವ್ಯ ದಂಪತಿಯ ಪುತ್ರ ಸ್ವಸ್ತಿಕ್ ವಿವಿಧ ಮೇಳಗಳ ಪ್ರದರ್ಶನಗಳಲ್ಲಿಯೂ ಭಾಗವಹಿಸಿ ವೃತ್ತಿಪರ ಕಲಾವಿದರ ಜೊತೆ ಪಾತ್ರನಿರ್ವಹಣೆ ಮಾಡುವ ಅನುಭವವನ್ನೂ ಗಳಿಸಿಕೊಂಡಿದ್ದಾರೆ.