ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ, ಕಲಾವಿದ, ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ಕೆ.ವಿ. ಅವರು ಬರೆದ ಮಹಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯವು ಪಿ ಎಚ್ ಡಿ ಪದವಿ ನೀಡಿದೆ.
ಸಿಬಂತಿ ಪದ್ಮನಾಭ ಅವರು ಬರೆದ ಫೋಕ್ ಥೀಯೇಟರ್ ಫಾರ್ ಡೆವಲಪ್ಮೆಂಟ್ ಕಮ್ಮ್ಯೂನಿಕೇಷನ್ : ಎ ಸ್ಟಡಿ ಆಫ್ ಯಕ್ಷಗಾನ (‘Folk theatre for development communication: A study of Yakshgana) ಎಂಬ ಮಹಾಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾನಿಲಯ ಈ ಪದವಿ ನೀಡಿದೆ.
ಸ್ವತಃ ಯಕ್ಷಗಾನ ಕಲಾವಿದರೂ ಆದ ಸಿಬಂತಿ ಪದ್ಮನಾಭ ಪಿ ಎಚ್ ಡಿ ಅಧ್ಯಯನಕ್ಕಾಗಿ ಯಕ್ಷಗಾನವನ್ನೇ ಆರಿಸಿಕೊಂಡಿದ್ದರು. ಅವರು ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ| ಸತೀಶ್ ಕುಮಾರ್ ಅಂಡಿಂಜೆ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಿದ್ದರು.
ಸಿಬಂತಿ ಪದ್ಮನಾಭ ಅವರು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಸಿಬಂತಿ ವೆಂಕಟ್ರಮಣ ಭಟ್ ಮತ್ತು ಪರಮೇಶ್ವರಿ ದಂಪತಿಯ ಪುತ್ರ. ಸಿಬಂತಿ ಪದ್ಮನಾಭ ಅವರ ಪತ್ನಿ ಶ್ರೀಮತಿ ಆರತಿ ಪಟ್ರಮೆ ಕೂಡಾ ಕಾಲೇಜು ಉಪನ್ಯಾಸಕಿ ಮಾತ್ರವಲ್ಲದೆ ಪ್ರತಿಭಾನ್ವಿತ ಯಕ್ಷಗಾನ ಕಲಾವಿದೆ.
ತುಮಕೂರಿನಲ್ಲಿದ್ದುಕೊಂಡು ಪತಿ-ಪತ್ನಿಯರು ಯಕ್ಷಗಾನ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಇಬ್ಬರೂ ಯಕ್ಷಗಾನ ಕಲಾವಿದರಾಗಿದ್ದುದು ಮಾತ್ರವಲ್ಲದೆ ತುಮಕೂರಿನಲ್ಲಿ ಹಲವಾರು ಯಕ್ಷಗಾನ ಆಟ ಕೂಟಗಳನ್ನು ಸಂಘಟಿಸಿದ್ದರು.
ಯಕ್ಷಗಾನ ಕಲಾವಿದರನ್ನು ಪರಿಚಯಿಸುವ ಸರಣಿ ಕಾರ್ಯಕ್ರಮ ‘ಮಾತಿನ ಮಂಟಪ’ದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ಆರತಿ ಪಟ್ರಮೆಯವರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯೆ.
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions