ಯಕ್ಷಗಾನದ ಸವ್ಯಸಾಚಿ ‘ಮಾನಿಷಾದ’ ಖ್ಯಾತಿಯ ಪ್ರಸಂಗಕರ್ತೃ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕಳೆದ ಕೆಲವು ತಿಂಗಳಿಂದ Myelodysplasia ಎಂಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅವರ ಶುಶ್ರೂಷೆಗಾಗಿ azacytidine + venetoclax ಎಂಬ ಔಷಧಿಗೆ 6 ತಿಂಗಳ ಚಿಕಿತ್ಸೆಯ ಒಟ್ಟು ವೆಚ್ಚ 35 ರಿಂದ 40 ಲಕ್ಷದವರೆಗೆ ತಗಲುವುದೆಂಬ ವೈದ್ಯರ ಸೂಚನೆಯಿರುವುದರಿಂದ ಅವರ ಕುಟುಂಬ ಆರ್ಥಿಕ ಸಹಾಯಕ್ಕಾಗಿ ಕಲಾಭಿಮಾನಿಗಳನ್ನು ವಿನಂತಿಸಿದೆ.
ತೀರಾ ಇತ್ತೀಚಿನವರೆಗೂ ಕಟೀಲು ಮೇಳದ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿರುವ ಪುರುಷೋತ್ತಮ ಪೂಂಜರ ಪ್ರಸಕ್ತ ಸ್ಥಿತಿಯನ್ನು ಗಮನಿಸಿ ಅವರ ಚಿಕಿತ್ಸೆಗಾಗಿ ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗವು ಮೊದಲ ಹಂತದಲ್ಲಿ ರೂ. 1 ಲಕ್ಷದ ನಿಧಿಯನ್ನು ಹಸ್ತಾಂತರಿಸಿದೆ.
ಈ ನಿಧಿಗೆ ಮುಂಬೈಯ ಕಲಾ ಪೋಷಕರಾದ ಉದ್ಯಮಿ ರವೀಂದ್ರನಾಥ ಭಂಡಾರಿ, ಸಿಎ ಸುರೆಂದ್ರ ಶೆಟ್ಟಿ, ಸತೀಶ್ ಶೆಟ್ಟಿ ಕೊಟ್ರಾಡಿ, ಬಾಬು ಶೆಟ್ಟಿ ಪೆರಾರ, ಆನಂದ ಬಂಗೇರ ಬಜಪೆ, ಜಗದೀಶ್ ಶೆಟ್ಟಿ ಶಿವಪುರ, ಸುರೇಶ ಶೆಟ್ಟಿ ಕಡಂದಲೆ, ಅಜಿತ್ ಶೆಟ್ಟಿ ಕೊಟ್ರಾಡಿ, ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ವಸಾಯಿ ಜೀವದಾನಿ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಮತ್ತು ಪದಾಧಿಕಾರಿಗಳು ದೇಣಿಗೆ ನೀಡಿ ಸಹಕರಿಸಿದ್ದಾರೆ.
ಮುಂಬಯಿ ಕಲಾಭಿಮಾನಿಗಳಿಂದ ಸಂಗ್ರಹವಾದ ಒಟ್ಟು ಹಣವನ್ನು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುರುಷೋತ್ತಮ ಪೂಂಜರಿಗೆ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಮುಂಬಯಿ ಉದ್ಯಮಿಗಳಾದ ಆನಂದ ಬಂಗೇರ ಬಜ್ಪೆ ಮತ್ತು ಅಜಿತ್ ಶೆಟ್ಟಿ ಕೊಟ್ರಾಡಿ ಉಪಸ್ಥಿತರಿದ್ದರು.
(ಪುರುಷೋತ್ತಮ ಪೂಂಜರ ಚಿಕಿತ್ಸೆಗೆ ನೆರವು ನೀಡಲಿಚ್ಛಿಸುವ ಕಲಾಭಿಮಾನಿಗಳು ಮತ್ತು ದಾನಿಗಳು Parikshith Poonja a/c no. 343901507425 IFSC : ICIC 0003439 Google pay no. 8197256366 ಇದಕ್ಕೆ ಸಂಪರ್ಕಿಸಲು ಕೋರಲಾಗಿದೆ.)
- 10th Standard, Social – Economics Chapter 31 – ‘PUBLIC FINANCE AND BUDGET’ – Solutions
- 10th Standard, English Poem 8 – ‘Mending Wall’ – Solutions
- 10th Standard Social Science, Chapter 19 – ‘INDIA AFTER INDEPENDENCE’ – Solutions
- 9th Standard – English – UNIT 8 PROSE – ‘THE STORY-TELLER’ – Solutions
- 9th Social Science – Chapter 26 – ‘Community’ – Solutions