ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಮತ್ತು ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಸುಳ್ಯ ಇವರ ಸಹಯೋಗದಲ್ಲಿ ಯಕ್ಷಗಾನ ಪಠ್ಯಪುಸ್ತಕಾಧಾರಿತ ‘ಹೆಜ್ಜೆ’ ವೀಡಿಯೊ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ನಂತರ ಇಂಗ್ಲಿಷ್ ಯಕ್ಷಗಾನ ಬಯಲಾಟವೂ ನಡೆಯಲಿದೆ. ಈ ಸಂದರ್ಭದಲ್ಲಿ ‘ಪ್ರಜ್ಞಾ ಯಕ್ಷಗಾನ ಕಲಾಶಾಲೆ’ಯ ಉದ್ಘಾಟನಾ ಕಾರ್ಯಕ್ರಮವೂ ಜರಗಲಿರುವುದು.
ಇಂದು ದಿನಾಂಕ 21.02.2021ರ ಆದಿತ್ಯವಾರ ಸಂಜೆ ಘಂಟೆ 4.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವರಾದ ಎಸ್. ಅಂಗಾರ ಅವರು ನೆರವೇರಿಸಲಿದ್ದಾರೆ.
ಯಕ್ಷಗಾನ ರಂಗದ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಮತ್ತು ಬಿಡುಗಡೆ ಕಾರ್ಯಕ್ರಮಗಳ ನಂತರ Disgraced Sudarshana ಎಂಬ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಪ್ರಸಂಗದ ಪದ್ಯಗಳೂ ಇಂಗ್ಲಿಷ್ ಭಾಷೆಯಲ್ಲಿಯೇ ಇರುತ್ತವೆ. ಹಾಡುಗಾರಿಕೆ ಮತ್ತು ಅರ್ಥಗಾರಿಕೆಯೆರಡೂ ಇಂಗ್ಲಿಷ್ ಭಾಷೆಯಲ್ಲಿರುವುದು ವಿಶೇಷ. ಕಾರ್ಯಕ್ರಮದ ವಿವರವನ್ನು ಕೆಳಗಡೆ ನೀಡಲಾಗಿದೆ.

