ಜಾರ್ಖಂಡ್‌ನ ಸರೈಕೆಲಾದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಂಘಟಿತ ಕಿಸಾನ್ ಜನಕ್ರೋಶ್ ರ್ಯಾಲಿಯಲ್ಲಿ ಬಾಲಿವುಡ್ ಹಾಡೊಂದರ ರಾಗಕ್ಕೆ ನರ್ತಕಿಯೊಬ್ಬರು ನರ್ತಿಸಿದರು.
ಜಾರ್ಖಂಡ್‌ನ ಸರೈಕೆಲಾದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಂಘಟಿತ ಕಿಸಾನ್ ಜನಕ್ರೋಶ್ ರ್ಯಾಲಿಯಲ್ಲಿ ನರ್ತಕಿ ಬಾಲಿವುಡ್ ಹಾಡೊಂದರ ರಾಗಕ್ಕೆ ಗರಗರನೆ ಕುಣಿದಿದ್ದು ಪಕ್ಷದ ಮುಖಂಡರು ವೇದಿಕೆಯಿಂದ ನೋಡುತ್ತಿದ್ದರು.
ಸಾರೈಕೆಲಾದಲ್ಲಿ ನಡೆದ ಕಾಂಗ್ರೆಸ್ Rallyಯ ಆಶಯ ಮತ್ತು ಉದ್ದೇಶವನ್ನು ಪ್ರಶ್ನಿಸಿದ ಬಿಜೆಪಿ ಅಲ್ಲಿ ನೃತ್ಯದ ಅವಶ್ಯಕತೆಯನ್ನು ಪ್ರಶ್ನಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಜನಕ್ರೋಶ್ ರಾಲಿಯ ನೃತ್ಯದ ವಿಡಿಯೋವೊಂದರಲ್ಲಿ, ನಾಯಕರು ವೇದಿಕೆಯಲ್ಲಿ ಕುಳಿತಾಗ ಪ್ರದರ್ಶನವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು.
ಕಾಂಗ್ರೆಸ್ಸಿನ ಈ ರಾಲಿಯಲ್ಲಿನ ತುಣುಕನ್ನು ಹಂಚಿಕೊಂಡ ಬಿಜೆಪಿ ವಕ್ತಾರ ಆರ್.ಪಿ.ಸಿಂಗ್ ಅವರು ರೈತರ ಪರವಾಗಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದರು ಮತ್ತು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಮುಂದೆ ಯಾರು ಎಂದು ಕೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು ‘ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರನ್ನು ಪ್ರಚೋದಿಸಲು ಪಕ್ಷವು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲುದು ಎಂಬುದನ್ನು ಇದರಿಂದ ತಿಳಿಯಬಹುದು’ ಎಂದು ವಾಗ್ದಾಳಿ ನಡೆಸಿದರು.