ಪ್ರಖ್ಯಾತ ಯಕ್ಷಗಾನ ವೇಷದಾರಿ ಯಕ್ಷಗಾನ ರಂಗಸ್ಥಳದ ಅಭಿಮನ್ಯು ಎಂದೇ ಖ್ಯಾತರಾಗಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ನಿಧನಕ್ಕೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.,) ದೇಲಂಪಾಡಿ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಸಂತಾಪ ಸೂಚನೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಮತ್ತು ಸಾಹಿತಿ, ವಿದ್ವಾಂಸ ಡಾ. ರಮಾನಂದ ಬನಾರಿ ಮತ್ತು ಹಾಗೂ ಸಂಘದ ಸರ್ವಸದಸ್ಯರು
“ಯಕ್ಷಗಾನದ ಅಗ್ರಮಾನ್ಯ ವೇಷಧಾರಿ ವಿದ್ಯಾವಿನಯ ಸಂಪನ್ನ ಕಲಾವಿದ ಶ್ರೀಧರ ಭಂಡಾರಿಯವರು ರಂಗಸ್ಥಳದಿಂದ ಶಾಶ್ವತವಾಗಿ ನಿರ್ಗಮಿಸಿದ ವಾರ್ತೆ ಅತ್ಯಂತ ವಿಷಾದವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲೆಂದು ಪ್ರಾರ್ಥಿಸುತ್ತೇವೆ. ಅವರ ಕೀರ್ತಿ ಚಿರಕಾಲ ಉಳಿಯಲಿ.” ಎಂದು ಪ್ರಾರ್ಥಿಸಿದ್ದಾರೆ.