ಐಪಿಎಲ್ ಹರಾಜಿನಲ್ಲಿ ಕ್ರಿಸ್ ಮೋರಿಸ್ (ರಾಜಸ್ತಾನ್ ರಾಯಲ್ಸ್) ಇದುವರೆಗಿನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಐಪಿಎಲ್ 2021 ರ ಹರಾಜಿನಲ್ಲಿ ಕೃಷ್ಣಪ್ಪ ಗೌತಮ್ (ಚೆನ್ನೈ ಸುಪರ್ ಕಿಂಗ್ಸ್) ಭಾರತದ ಅತ್ಯಂತ ದುಬಾರಿ ಆಟಗಾರನಾದರು.
ಚೆನ್ನೈ ಸೂಪರ್ ಕಿಂಗ್ಸ್ ಚೇತೇಶ್ವರ ಪೂಜಾರ ಅವರನ್ನು ಐವತ್ತು ಲಕ್ಷ ರೂಪಾಯಿಗಳಿಗೆ ಖರೀದಿಸಿದೆ. ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಇಪ್ಪತ್ತು ಲಕ್ಷಕ್ಕೆ ಖರೀದಿಸಿದೆ,
ಈ ವರೆಗಿನ ಒಟ್ಟು ಹರಾಜಿನಲ್ಲಿ ಒಟ್ಟು 292 ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ ಅವರಲ್ಲಿ 164 ಭಾರತೀಯ ಕ್ರಿಕೆಟ್ ಆಟಗಾರರು ಮತ್ತು 128 ವಿದೇಶೀ ಆಟಗಾರರು.
ಕ್ರಿಸ್ ಮೋರಿಸ್ 16. 25 ಕೋಟಿ ರೂಪಾಯಿಗಳಿಗೆ ಹರಾಜಾದರು. ಅವರನ್ನು ರಾಜಸ್ತಾನ್ ರಾಯಲ್ಸ್ ಕೊಂಡುಕೊಂಡಿತು. ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಪಡೆಯಲು ಆರ್.ಸಿ.ಬಿ 14.25 ಕೋಟಿ ರೂಪಾಯಿಗಳನ್ನು ವೆಚ್ಚಮಾಡಿತ್ತು.
ಜ್ಯೇ ರಿಚರ್ಡ್ ಸನ್ 14 ಕೋಟಿ ರೂಪಾಯಿಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬಿನ ಪಾಲಾದರು. ಕೃಷ್ಣಪ್ಪ ಗೌತಮ್ ಅವರನ್ನು9.25 ಕೋಟಿ ಕೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ಕೊಂಡುಕೊಂಡಿತು.
ಹರಾಜಿನಲ್ಲಿ ಮಾರಾಟವಾದ ಟಾಪ್ ಫೈವ್ ಆಟಗಾರರು




