ಮಂದರ್ತಿ ಮೇಳದ ಯಕ್ಷಗಾನ ಬಯಲಾಟವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು ಇಲ್ಲಿ ನಾಡಿದ್ದು ದಿನಾಂಕ 20-2-2021ರಂದು ಶನಿವಾರ ರಾತ್ರಿ 8.30ರಿಂದ ಬೆಳಗಿನ ತನಕ ನಡೆಯಲಿದೆ.
ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳ, ಮಂದರ್ತಿ
ಪ್ರಸಂಗಗಳು – ಲಂಕಾದಹನ-ಪ್ರಮೀಳಾರ್ಜುನ- ಕನಕಾಂಗಿ ಕಲ್ಯಾಣ
ಸ್ಥಳ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು.
ದಿನಾಂಕ: 20-2-2021, ಶನಿವಾರ. ರಾತ್ರಿ 8.30ರಿಂದ.
ಕಲಾಭಿಮಾನಿಗಳಿಗೆ ಆದರದ ಸ್ವಾಗತ. ಆಟದ ನಡುವೆ ಭಾಷಣ, ಸನ್ಮಾನ ಇತ್ಯಾದಿ ತಡೆಗಳಿರುವುದಿಲ್ಲ. ಮತ್ತು ಪ್ರೇಕ್ಷಕರಿಗೆ ಶೌಚಾಲಯ ವ್ಯವಸ್ಥೆ ಇದೆ ಹಾಗೂ ಬಯಲಾಟವು ದೇವಾಲಯದ ಹೊರಾಂಗಣದಲ್ಲಿ ನಡೆಯುತ್ತದೆ ಎಂದು ಆಯೋಜಕರಾದ ಶ್ರೀ ದೇವು ಹನೆಹಳ್ಳಿ, ಶ್ರೀಮತಿ ಗೀತಾ ಹನೆಹಳ್ಳಿ ಮತ್ತು ಕುಟುಂಬದವರು ತಿಳಿಸಿದ್ದಾರೆ.