ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು 15. 02. 2021ರಂದು ಶ್ರೀ ದೇವಳದ ಭಗವದ್ಭಕ್ತ ಸಮೂಹದ ಸಹಕಾರದೊಂದಿಗೆ ರಾತ್ರಿ 9 ಘಂಟೆಗೆ ‘ಮೂಡಪ್ಪ ಸೇವೆ’ಯು ಜರಗಲಿರುವುದು.

ಕೋವಿಡ್ ನಿಯಮಾವಳಿಗಳಂತೆ ದೇವತಾರಾಧನೆ ಮತ್ತು ಉತ್ಸವವನ್ನು ಆಚರಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಅದರಂತೆ ಭಕ್ತಾದಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಸಂಜೆ 7 ಘಂಟೆಯಿಂದ ದಾಸ ಸಂಕೀರ್ತನಕಾರರಾದ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ‘ದಾಸ ಭಕ್ತಿಗಾನಾಮೃತ’ ನಡೆಯಲಿದೆ. ಆಮೇಲೆ ರಾತ್ರಿ 9 ಘಂಟೆಯಿಂದ ಯಕ್ಷಗಾನ ಬಯಲಾಟ ಕಾರ್ಯಕ್ರಮ ನಡೆಯಲಿದೆ.
ಶ್ರೀ ಪಾಂಚಜನ್ಯ ಯಕ್ಷಗಾನ ಕಲಾತಂಡ ನೇರಳಕಟ್ಟೆ ಇವರಿಂದ ‘ಭೃಗು ಲಾಂಛನ’ ಮತ್ತು ‘ರತಿ ಕಲ್ಯಾಣ’ ಎಂಬ ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.