ಸಾಂದರ್ಭಿಕ ಚಿತ್ರ
ಪುತ್ತೂರು ಸಮೀಪದ ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಇಂದು (15.01.2021) ದೈವಗಳ ಕೋಲ ಜರಗಲಿರುವುದು.
ಸಂಧ್ಯಾ ಕಾಲಕ್ಕೆ ದೈವಗಳ ಭಂಡಾರ ತೆಗೆಯುವ ವಿಧಿವಿಧಾನಗಳನ್ನು ಪೂರೈಸಿದ ನಂತರ ದೈವಗಳ ಕೋಲಕ್ಕೆ ಚಾಲನೆ ಸಿಗಲಿದೆ.
ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ. ಭಜನಾ ಕಾರ್ಯಕ್ರಮದ ನಂತರ ‘ಏಳು ಸತ್ಯೊಲು’ ಎಂಬ ತುಳು ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ರಾತ್ರಿ ದರ್ಶನ ಬಲಿ, ಬಟ್ಟಲು ಕಾಣಿಕೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಆ ಬಳಿಕ ಉಳ್ಳಾಕುಲು, ಹುಲಿಭೂತ, ಕೊಡಮಣಿತ್ತಾಯ, ಪಂಜುರ್ಲಿ ದೈವಗಳ ನೇಮ ನಡೆಯಲಿದೆ.