ಶ್ರೀ ವಿಷ್ಣುಮೂರ್ತಿ ಬಯಲಾಟ ಸೇವಾ ಸಮಿತಿ ಆಯೋಜಿಸುತ್ತಿರುವ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಪುತ್ತೂರು ಸಮೀಪದ ಇರ್ದೆ ಉಪ್ಪಳಿಗೆಯಲ್ಲಿ ಇಂದು ರಾತ್ರಿ 9.30ಕ್ಕೆ ಸರಿಯಾಗಿ ನಡೆಯಲಿದೆ.
ಕಟೀಲು ಮೂರನೆಯ ಮೇಳದವರಿಂದ ‘ಶ್ರೀ ದೇವಿ ಮಹಾತ್ಮೆ’ ಎಂಬ ಪ್ರಸಂಗದ ಪ್ರದರ್ಶನ ನಡೆಯಲಿದೆ.
ಕಳೆದ ಕೆಲವು ವರ್ಷಗಳಿಂದ ಶ್ರೀ ವಿಷ್ಣುಮೂರ್ತಿ ಬಯಲಾಟ ಸೇವಾ ಸಮಿತಿಯು ಕಟೀಲು ಮೇಳದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುತ್ತಿದೆ.