ಶ್ರೀ ಸುಬ್ರಾಯ ದೇವಸ್ಥಾನ, ಕಾಟುಕುಕ್ಕೆ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ, ಕಾಟುಕುಕ್ಕೆ 5-2-2021ನೇ ಶುಕ್ರವಾರದಿಂದ ತೊಡಗಿ 11.02.2021 ವರೆಗೆ ನಡೆಯುತ್ತಿರುವ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವದಲ್ಲಿ ಭಾಗವತ ಸಪ್ತಾಹದ ನಾಲ್ಕನೇ ದಿನ 8-2-2021ನೇ ಸೋಮವಾರ ‘ಶ್ರೀಮಾತಾ ಮಹಿಳಾ ಭಜನಾ ಮಂಡಳಿ’ ಬದಿಯಡ್ಕ ಇದರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.



ಮುಂಜಾನೆ ಭಾಗವತ ಪೂಜೆಯ ಬಳಿಕ ಭಾಗವತ ಪಾರಾಯಣ ಪ್ರಾರಂಭ. ಅಪರಾಹ್ಣದ ಪ್ರವಚನದ ನಡುವಿನ ಬಿಡುವಿನಲ್ಲಿ ಭಜನಾ ಗುರುಗಳ ಜೊತೆಗೆ ಗೋವಿಂದಗಾನವೂ ನೆರವೇರಿತು. 4ನೇ ದಿನದ ಪ್ರವಚನದಲ್ಲಿ ಮನ್ವಂತರಗಳು, ಗಜೇಂದ್ರಮೋಕ್ಷ, ಸಮುದ್ರಮಥನ, ವಾಮನಾವತಾರ, ಭಕ್ತ ಅಂಬರೀಶ ಈ ಕಥಾಭಾಗಗಳ ಹೃದ್ಯ ನಿರೂಪಣೆ ನಡೆಯಿತು. ಸಂಜೆ ಕೀರ್ತನೆಗಳ ಗಾಯನದ ಬಳಿಕ ಮಂಗಳಾರತಿಯೊಂದಿಗೆ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು.