ಒಂದು ಕಾಲದಲ್ಲಿ ತೆಂಕುತಿಟ್ಟು ಯಕ್ಷಗಾನದ ಉತ್ತಮ ವೇಷಧಾರಿಯೆಂದು ಗುರುತಿಸಲ್ಪಟ್ಟಿದ್ದ ಹಾಗೂ ಅಳಿಕೆ ಕಾಲೇಜಿನ ನಿವೃತ್ತ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಶ್ರೀ ಕೆ.ವಿ.ಸುಬ್ರಾಯ, ಅಳಿಕೆ ಅವರು ಇಂದು ಬೆಳಿಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. ಈಚೆಗೆ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ ಅವರು ಆಳಿಕೆಯ ತಮ್ಮ ಸ್ವಗೃಹದಲ್ಲಿ ತಮ್ಮ ಕೊನೆಯುಸಿರನ್ನೆಳೆದರು.
ಕೆ.ವಿ. ಸುಬ್ರಾಯರು ತೆಂಕುತಿಟ್ಟಿನ ಉತ್ತಮ ವೇಷಧಾರಿಯಾಗಿ ಜನಪ್ರಿಯರಾದವರು. ಇವರ ಕಿರಿಯ ಸಹೋದರ ಶ್ರೀ ಕೆ.ವಿ ಗಣಪಯ್ಯ ಆಲಜೆ ಅವರು ತಾಳಮದ್ದಳೆಯ ಪ್ರಸಿದ್ಧ ಅರ್ಥಧಾರಿಯಾಗಿದ್ದು ಈಗ ಕಲಾಕ್ಷೇತ್ರದಿಂದ ನಿವೃತ್ತಿಯಾಗಿದ್ದಾರೆ. ಅಣ್ಣ ತಮ್ಮಂದಿರಿಬ್ಬರೂ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ವ್ಯವಸಾಯ ಮತ್ತು ಹೆಸರು ಮಾಡಿದವರು. ಕೆ.ವಿ ಸುಬ್ರಾಯರು ಪ್ರಬುದ್ಧ ವಯಸ್ಸಿಗೆ ಬಂದ ಮೇಲೆ ಪ್ರಖ್ಯಾತ ಯಕ್ಷಗಾನ ಕಲಾವಿದ, ವೇಷಧಾರಿ ಶ್ರೀ ಕದ್ರಿ ವಿಷ್ಣು ಅವರ ಪ್ರಭಾವಕ್ಕೆ ಒಳಗಾಗಿದ್ದರು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಅವರಿಂದ ಪ್ರಭಾವಿತರಾಗಿ ತಾನೂ ಯಕ್ಷಗಾನ ಕ್ಷೇತ್ರಕ್ಕೆ ಕಾಲಿರಿಸಿದ್ದರು. ವೃತ್ತಿರಂಗದಲ್ಲಿದ್ದುಕೊಂಡೇ ಅಂದರೆ ಕಾಲೇಜು ಉಪನ್ಯಾಸಕ ವೃತ್ತಿಯ ಜೊತೆಯಲ್ಲಿಯೇ ಒಳ್ಳೆಯ ಯಕ್ಷಗಾನದ ವೇಷಧಾರಿಯಾಗಿಯೂ ಪ್ರಸಿದ್ಧರಾದವರು. ಯಕ್ಷಗಾನದ ಮಾತೆತ್ತಿದಾಗಲೆಲ್ಲಾ ಕದ್ರಿ ವಿಷ್ಣು ಅವರ ಗುಣಗಾನ ಮಾಡುತ್ತಿದ್ದ ಕೆ.ವಿ.ಸುಬ್ರಾಯರು ಕದ್ರಿ ವಿಷ್ಣು ಅವರಿಂದ ಯಕ್ಷಗಾನದ ಸಾಕಷ್ಟು ಸೂಕ್ಷ್ಮ ವಿಷಯಗಳನ್ನು ಅರ್ಥ ಮಾಡಿ ಕಲಿತುಕೊಂಡವರು. ಕೆ.ವಿ.ಸುಬ್ರಾಯ ಅವರ ದೇವೇಂದ್ರ, ರಕ್ತಬೀಜ, ಇಂದ್ರಜಿತು, ಅರ್ಜುನ, ಅತಿಕಾಯ ಮೊದಲಾದ ಪಾತ್ರಗಳು ಪ್ರಸಿದ್ಧಿಯನ್ನು ಪಡೆದಿತ್ತು ಮತ್ತು ಇಂದಿಗೂ ಹಿರಿಯ ಪ್ರೇಕ್ಷಕರ ಮನಸ್ಸಿನಲ್ಲಿ ಹಸಿರಾಗಿ ಉಳಿದಿವೆ.