ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರು ಸಿರಿಬಾಗಿಲಿನಲ್ಲಿ ನಿರ್ಮಿಸುತ್ತಿರುವ ಸಾಂಸ್ಕೃತಿಕ ಭವನ ನಿರ್ಮಾಣ ಯೋಜನೆಯ ಬಗ್ಗೆ ಸಮಾಲೋಚನಾ ಸಭೆಯು ಇಂದು (31.01.2021) ಸಮಾಜ ಮಂದಿರದಲ್ಲಿ ಜರುಗಿತು .
ಸಿರಿಬಾಗಿಲು ವೆಂಕಪ್ಪಯ್ಯರವರು ನಾಲ್ಕು ದಶಕಗಳ ಹಿಂದಿನ ಗಡಿನಾಡಿನ ಶ್ರೇಷ್ಠ ಕವಿ, ವಿಮರ್ಶಕ ಹಾಗೂ ಲೇಖಕರು . ಕನ್ನಡ ಭಾಷೆಗೆ ಹೊಸ ಕಸುವನ್ನು ಕೊಟ್ಟವರು . ವೆಂಕಪ್ಪಯ್ಯರವರು ಕುಂಬಳೆ ಅರಸೊತ್ತಿಗೆಯ ಬಗ್ಗೆ, ತುಳುನಾಡ ಕೇಸರಿ ಜಯಸಿಂಹನ ಬಗ್ಗೆ, ಯಕ್ಷಗಾನದ ವಾಲ್ಮೀಕಿ ಎನಿಸಿದ ಪಾರ್ತಿಸುಬ್ಬನ ಬಗ್ಗೆ, ಮಾಯಿಪ್ಪಾಡಿ ಅರಮನೆಯ ಜಟ್ಟಿ ಪುಳ್ಕೂರು ಬಾಚನ ಬಗ್ಗೆ ಮೌಲ್ಯಯುತವಾದ ಲೇಖನ ಸಹಿತ ನೂರಾರು ಕೃತಿಗಳನ್ನು ಕುರಿತು ಬರೆದಿದ್ದಾರೆ . ಅವರ ಹೆಚ್ಚಿನ ಕೃತಿಗಳನ್ನು ಕೇರಳ ಸರಕಾರದ ಶಿಕ್ಷಣ ಇಲಾಖೆಯು ಉಪಪಠ್ಯವನ್ನಾಗಿಸಿದೆ .
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಇಂತಹ ಮಹಾನ್ ಕಲಾವಿದರ ಹೆಸರು ಚಿರಸ್ಥಾಯಿಯಾಗಿ ಉಳಿಯಲು “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ” ನಿರ್ಮಾಣದ ಉದ್ದೇಶದಿಂದ ಸಮಿತಿಯನ್ನು ರಚಿಸಲಾಗಿದ್ದು ಈಗಾಗಲೇ ಭವನದ ಅರ್ಧದಷ್ಟು ಕಾಮಗಾರಿ ನಡೆದಿದೆ . ಮೂಡಬಿದಿರೆಯ ಅಭಿಮಾನಿಗಳ ಕೂಡುವಿಕೆಯಲ್ಲಿ ಇಂದು ನಡೆದ ಸಮಾಲೋಚನಾ ಸಭೆಯಲ್ಲಿ ಧರ್ಮದರ್ಶಿ ಹಾಗೂ ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಶ್ರೀಪತಿ ಭಟ್, ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಸುಪ್ರಸಿದ್ಧ ಭಾಗವತರಾದ ರಾಮಕೃಷ್ಣ ಮಯ್ಯ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಾಧಾಕೃಷ್ಣ ಕಲ್ಚಾರ್ ಹಾಗೂ ಯೋಗೀಶ್ ರಾವ್ ಚಿಗುರುಪಾದೆ, ಎಂ.ಶಾಂತರಾಮ ಕುಡ್ವ, ಪ್ರೇಮನಾಥ ಮಾರ್ಲ, ದೇವಾನಂದ ಭಟ್, ಗೋವರ್ಧನ ಹೊಸಮನಿ, ಸದಾಶಿವ ರಾವ್, ರಾಜಾರಾಮ ರಾವ್, ಸತೀಶ್ ಅಡಪ, ಕುಮಾರ ಶೆಟ್ಟಿ ಹಾಗೂ ಮೂಡಬಿದಿರೆಯ ವಿವಿಧ ಸಂಘಟನೆಗಳ ಮುಖ್ಯಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.



ಮೂಡಬಿದಿರೆಯ ಕಲಾಭಿಮಾನಿಗಳು ಒಟ್ಟಾಗಿ ಗೌರವಯುತ ಮೊತ್ತವನ್ನು ಪ್ರತಿಷ್ಠಾನಕ್ಕೆ ನೀಡಲು ನಿರ್ಧಾರ ಕೈಗೊಂಡರು. ರಾಮಕೃಷ್ಣ ಮಯ್ಯರು ಸ್ವಾಗತಿಸಿದರು. ರಾಧಾಕೃಷ್ಣ ಕಲ್ಚಾರರು ಭವನದ ಕುರಿತಾದ ಮಾಹಿತಿ ಹಾಗೂ ರಾಜಾರಾಮ ರಾವ್ ವೆಂಕಪ್ಪಯ್ಯರವರ ಸಾಧನೆಯ ಬಗ್ಗೆ ಪರಿಚಯಿಸಿದರು. ರವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸತೀಶ ಅಡಪರು ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ಸಮಾಲೋಚನಾ ಸಭೆ ನಡೆಸಲಾಗುವುದು ಎಂದು ರಾಮಕೃಷ್ಣ ಮಯ್ಯರು ತಿಳಿಸಿದರು. ಸಮಾಲೋಚನಾ ಸಭೆಯ ನಂತರ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಗೇರುಸೊಪ್ಪೆ ಶಾಂತಪ್ಪಯ್ಯ ವಿರಚಿತ “ಶಲ್ಯ ಸಾರಥ್ಯ” ತಾಳಮದ್ದಳೆ ಜರುಗಿತು.