ನಿನ್ನೆ 30.01.2021ರಂದು ಮಂಗಳೂರಿನ ಕದ್ರಿ ದೇವಸ್ಥಾನದ ರಾಜಾಂಗಣದಲ್ಲಿ ನಡೆದ, ‘ರಂಗಸ್ಥಳ ಮಂಗಳೂರು’ ಆಯೋಜಿಸಿದ ಪೆರ್ಡೂರು ಮೇಳದ ಕಂಸ-ಕಂಸ-ಕಂಸ ಯಕ್ಷಗಾನಕ್ಕೆ ಪ್ರೇಕ್ಷಕರು ಕಿಕ್ಕಿರಿದ ಸಂಖ್ಯೆಯಲ್ಲಿ ಆಗಮಿಸಿದ್ದರು (ಫೋಟೋ ನೋಡಿ).


ಈ ಸಂದರ್ಭ ಖ್ಯಾತ ಸ್ತ್ರೀ ವೇಷಧಾರಿ ಶ್ರೀ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಭಾಗವತ ಶ್ರೀ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಹಾಸ್ಯಗಾರ ಶ್ರೀ ರವೀಂದ್ರ ದೇವಾಡಿಗರನ್ನು ‘ರಂಗಸ್ಥಳ ಮಂಗಳೂರು’ ವತಿಯಿಂದ ಸನ್ಮಾನಿಸಲಾಯಿತು