ಅನ್ವಿತಾ ಭಟ್ ಆಲಂಕೋಡ್ಲು ಇವರು ಈ ಸಾಲಿನ ಅಂದರೆ 2020-21 ರ ವರ್ಷದಲ್ಲಿ ಕರ್ನಾಟಕ ಸೆಕೆಂಡರಿ ಎಜುಕೇಶನ್ ಎಕ್ಸಾಮಿನೇಷನ್ ಬೋರ್ಡ್ ನಡೆಸಿರುವ ಸೀನಿಯರ್ ಭರತನಾಟ್ಯ ಪರೀಕ್ಷೆಯಲ್ಲಿ ಶೇಕಡಾ 94.5 ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾಳೆ.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಪ್ರಸ್ತುತ ಬೆಂಗಳೂರಿನ ಮಿತ್ರ ಅಕಾಡೆಮಿಯ ICSE ಶಾಲೆಯಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಅನ್ವಿತಾ ಭಟ್ 2018ರ ಮೇ ತಿಂಗಳಿನಲ್ಲಿ ಕರ್ನಾಟಕ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ 99 ಶೇಕಡಾ ಅಂಕಗಳೊಂದಿಗೆ ಕರ್ನಾಟಕ ರಾಜ್ಯದಲ್ಲಿಯೇ ಮೂರನೆಯ ರಾಂಕ್ ನೊಂದಿಗೆ ತೇರ್ಗಡೆ ಹೊಂದಿದ್ದಳು. ವೆಂಕಟ್ರಾಜ ಅಲಂಕೋಡ್ಲು ಮತ್ತು ಪ್ರಶಾಂತಿ ದಂಪತಿಗಳ ಪುತ್ರಿಯಾದ ಅನ್ವಿತಾ ಭಟ್ ಭರತನಾಟ್ಯವನ್ನು ಸುಮಾರು ಏಳು ವರ್ಷಗಳಿಂದ ವಿದುಷಿ ಶ್ರೀಮತಿ ಪೂರ್ಣಿಮಾ ಮೋಹನ್ ರಾಮ್ ಅವರಿಂದ ಅಭ್ಯಸಿಸುತ್ತಿದ್ದಾರೆ.




ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಥಮವಾಗಿ ಅರುಣಾ ರಾಜಗೋಪಾಲ್ ಅವರಲ್ಲಿಯೂ ಆಮೇಲೆ ಸುಮಾರು ಎಂಟು ವರ್ಷಗಳ ಕಾಲ ವಿದುಷಿ ಲಕ್ಷ್ಮಿ ಆರ್. ರಾವ್ ಅವರಲ್ಲಿಯೂ ಅಭ್ಯಾಸ ಮಾಡಿ ಈಗ ಟಿ.ವಿ. ರಾಮಪ್ರಸಾದ್ ಅವರಲ್ಲಿ ತನ್ನ ಸಂಗೀತಾಭ್ಯಾಸವನ್ನು ಮುಂದುವರಿಸುತ್ತಿದ್ದಾರೆ.