Saturday, January 18, 2025
Homeಯಕ್ಷಗಾನಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ 'ದಕ್ಷಯಜ್ಞ'

ಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನ ‘ದಕ್ಷಯಜ್ಞ’

“ಯಕ್ಷಗಾನ ಭರತನಾಟ್ಯ ಶಾಸ್ತ್ರೀಯ ಸಂಗೀತ ಮೊದಲಾದ ಭಾರತೀಯ ಕಲೆಗಳು ಮನಸ್ಸನ್ನು ಅಂತರ್ಮುಖಗೊಳಿಸಿ ಸಶಕ್ತರನ್ನಾಗಿಸುತ್ತವೆ. ದಕ್ಷಯಜ್ಞದಂಥ ಪ್ರಸಂಗಗಳು ಒಳಿತು ಮಾಡುವುದಕ್ಕೆ ಪ್ರಚೋದನೆ ನೀಡುವವಲ್ಲದೇ ಕೆಡಕು ಮಾಡಬಾರದೆಂಬ ಅರಿವು ಮೂಡಿಸುತ್ತವೆ. ಭಾರತೀಯ ಕಲೆಗಳ ಅನುಸಂಧಾನ, ಆಸ್ವಾದನೆ ಮಾಡಿದಂತೆಲ್ಲ ಜ್ಞಾನ ಹೆಚ್ಚುತ್ತದೆ, ಅಂತರಂಗ ಮುದಗೊಳ್ಳುತ್ತದೆ.

ಪಾಶ್ಚಾತ್ಯ ನೃತ್ಯ ಸಂಗೀತ ವಿಚಾರಧಾರೆಗಳು ಇಂದ್ರಿಯ ಮನಗಳನ್ನು ಹೊರಮುಖಕ್ಕೆ ಸೆಳೆದು ದಬ್ಬಿ ದೇಹ ಮನಶ್ಶಕ್ತಿಗಳನ್ನು ಕುಗ್ಗಿಸುತ್ತವೆ. ಆದರೆ ನಮ್ಮ ಭಾರತೀಯ ಕಲೆ ವಿಚಾರಧಾರೆಗಳು ದೇಹಮನಗಳನ್ನು ಪುಳಕಿತಗೊಳಿಸಿ, ಶಕ್ತಿಯನ್ನು ನೂರ್ಮಡಿಗೊಳಿಸುತ್ತವೆ”ಎಂದು ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ ಆರೂಢಭಾರತೀ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಸಂಜೆ (ದಿನಾಂಕ 17-01-2021) ಕೆಂಗೇರಿ ಉಪ ನಗರದ ಕೊಮ್ಮಘಟ್ಟದಲ್ಲಿ ಓಂಯೋಗಧಾಮ ಟ್ರಸ್ಟ್ ಏರ್ಪಡಿಸಿದ ಸಂಕ್ರಾಂತಿ ಕಲೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕಲಾ ಕದಂಬ ಆರ್ಟ್ ಸೆಂಟರ್ ನ ವಿದ್ಯಾರ್ಥಿಗಳು ಪ್ರದರ್ಶಿಸಿದ ಯಕ್ಷಗಾನವು ನಿಜಕ್ಕೂ ಒಂದು ಉತ್ತಮ ಪ್ರದರ್ಶನವಾಗಿ ಮೂಡಿ ಬಂದಿದೆ ನುರಿತ ಕಲಾವಿದರಂತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಪ್ರಸಿದ್ದ ಯಕ್ಷಗಾನ ಕಲಾವಿದರಾದ ಡಾ.ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಮೂಡಿ ಬಂದ ಈ ಪ್ರಸಂಗ ಉರಾಳರ ಪ್ರತಿಭೆಗೆ ಸಾಟಿ ಇಲ್ಲಾ ಎಂಬುದು ನಿಜಕ್ಕೂ ಮೆಚ್ಚುವಂತದ್ದು ಎಂದು ಸ್ವಾಮೀಜಿಯವರು ಪ್ರಶಂಸೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯೊಂದಿಗೆ ಕಲಾಕದಂಬ ಆರ್ಟ ಸೆಂಟರ್ ನಿರ್ದೇಶಕ ಡಾ ರಾಧಾಕೃಷ್ಣ ಉರಾಳ್ ಅವರು ಪರಿಕಲ್ಪಿಸಿ ನಿರ್ದೇಶಿಸಿದ, ಮಧುಮಿತಾ, ಅದಿತಿ ಉರಾಳ್, ಪೂಜಾ ಆಚಾರ್, ಪೂರ್ಣಿಮಾ ಆಚಾರ್, ಮೊದಲಾದವರು ಅಭಿನಯಿಸಿ ಪ್ರದರ್ಶಿಸಿದ, ದಕ್ಷಯಜ್ಞ ಯಕ್ಷಗಾನ ಪ್ರಸಂಗ ಸಭಿಕರ, ಕಲಾಸಕ್ತರ ಮನಸೂರೆಗೊಂಡಿತು. ಓಂ ಯೋಗಧಾಮ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಸ್ವಪ್ನಾ ಪ್ರದೀಪ್, ಡಾ. ರಾಧಾಕೃಷ್ಣ ಉರಾಳ, ಕದಂಬ ಪ್ರತಿಷ್ಠಾನದ ಶ್ರೀ ದೇವರಾಜ ಕದಂಬ, ಮುರಳೀಧರ ನಾವಡ, ನಿತ್ಯಾನಂದ ನಾಯಕ್, ವಿಶ್ವನಾಥ ಉರಾಳ್, ನರಸಿಂಹ ಮೂರ್ತಿ, ಸಿ. ಎಚ್. ಕೃಷ್ಣಯ್ಯ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments