ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಆಶ್ರಯದಲ್ಲಿ ದಿ-10/12/2020 ಗುರುವಾರದಂದು ನಾಟ್ಯ ಸಂಪದ (ರಿ.) ಸಂಸ್ಥೆಯ ಯಕ್ಷಗಾನ ತರಗತಿಗಳು ಪದ್ಮನಾಭ ನಗರದ ಶ್ರೀ ಪ್ರಸನ್ನಗಣಪತಿ ದೇವಾಲಯದಲ್ಲಿ ಉದ್ಘಾಟಿತಗೊಂಡವು.
- 9th English, UNIT 9 PROSE – AN ASTROLOGER’S DAY
- 9th Standard English POEM 10 – PHOTOGRAPH
- 10th Standard English, NON-DETAIL – Ulysses and the Cyclops
- 10th Standard, Social – Geography CHAPTER 28 – INDIA – MAJOR INDUSTRIES
- Chapter 24 – SOCIAL CHALLENGES
ಗುರುಗಳಾದ ಶ್ರೀ ರವೀಶ ಹೆಗಡೆ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರಾದ ಶ್ರೀ ಶ್ರೀನಿವಾಸ ಸಾಸ್ತಾನ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ಜೀವನದ ಉನ್ನತಿಗೆ ಕಲೆಯೆ ಆಧಾರ, ಹಾಗಾಗಿ ಯಾವುದಾದರು ಕಲೆಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕೆಂದು ನುಡಿದರು.

ಸೃಷ್ಠಿ ಕಲಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಛಾಯಾಪತಿ ಕಂಚೀಬೈಲ್ ಇವರು ಕಲಾಪೋಷಣೆ ನಮ್ಮ ನಿತ್ಯದ ಕಾಯಕವಾಗಬೇಕು, ಆಗ ಕಲೆಯೆ ನಮ್ಮನ್ನು ಪೋಷಿಸುತ್ತದೆ ಎಂಬ ಅಧ್ಯಕ್ಷ ನುಡಿಗಳೊಂದಿಗೆ ಹಾರೈಸಿದರು.

ಪೋಷಕರು ಮಕ್ಕಳ ಮಾನಸಿಕ ಹಾಗೂ ದೈಹಿಕ ದೃಢತೆಗೆ ಯಕ್ಷಗಾನ ಸಹಾಯಕಾರಿ ಎಂಬ ಮಾತುಗಳನ್ನಾಡಿದರು. ಶ್ರೀ ಕೃಷ್ಣಪ್ರಸಾದ್ ವಂದಿಸಿದರು. ಕುಮಾರಿ ಅನುಶ್ರೀ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಹೆಜ್ಜೆಯ ಆರಂಭದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
