ಕರ್ನಾಟಕ ಯಕ್ಷಗಾನ ಅಕಾಡೆಮಿಯು ದಿನಾಂಕ 12 ಡಿಸೆಂಬರ್ 2020ರಂದು ಗೋಡೆ ನಾರಾಯಣ ಹೆಗಡೆ ಇವರ ‘ಸಾಕ್ಷ್ಯಚಿತ್ರ ಬಿಡುಗಡೆ’, ‘ವಿಚಾರಸಂಕಿರಣ’, ‘ಪ್ರಾತ್ಯಕ್ಷಿಕೆ’ ಹಾಗೂ ‘ಯಕ್ಷಗಾನ ಕಾರ್ಯಕ್ರಮ’ವನ್ನು ಶ್ರೀ ಶಾರದಾಂಬ ದೇವಸ್ಥಾನ, ನಾಯ್ಕನಕೆರೆ, ಯಲ್ಲಾಪುರ ಇಲ್ಲಿ ಹಮ್ಮಿಕೊಂಡಿದೆ.
- 5th Standard, English LESSON 10 – MOVING PICTURES
- 7th English, Prose Unit 7 – A Tribute to Netaji
- 7th Social History, CHAPTER 21 – PROGRESS IN DIFFERENT FIELDS
- 7th Social History, CHAPTER 20 – KARNATAKA-ECONOMIC AND SOCIAL TRANSFORMATION
- 7th Standard English Unit 8 – The Town by the Sea
ಈ ಕಾರ್ಯಕ್ರಮವು ಡಿಸೆಂಬರ್ 12 ಶನಿವಾರದಂದು ಬೆಳಿಗ್ಗೆ 10 ಘಂಟೆಗೆ ಆರಂಭವಾಗಲಿದೆ. ಸಚಿವರಾದ ಶ್ರೀ ಶಿವರಾಮ ಹೆಬ್ಬಾರರಿಂದ ಬೆಳಿಗ್ಗೆ 10 ಘಂಟೆಗೆ ಉದ್ಘಾಟನೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ.


ಈ ಕಾರ್ಯಕ್ರಮದ ನಂತರ ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗ್ಗೆ ವಿಚಾರ ಸಂಕಿರಣ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಇದರ ನಂತರದ ಕಾರ್ಯಕ್ರಮವಾಗಿ ‘ಮಹಿಳಾ ಹಿಮ್ಮೇಳ’ದ ಬಗ್ಗೆ ತೆಂಕು ಬಡಗಿನ ಪ್ರಾತ್ಯಕ್ಷಿಕೆ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕೊನೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
