Saturday, January 18, 2025
Homeಯಕ್ಷಗಾನಯಕ್ಷಗಾನ ಕಲಾವಿದ ಬಣ್ಣದ ಕುಷ್ಟ ನಿಧನ

ಯಕ್ಷಗಾನ ಕಲಾವಿದ ಬಣ್ಣದ ಕುಷ್ಟ ನಿಧನ

ತಮ್ಮ ಬಣ್ಣದ ವೇಷದ ಖ್ಯಾತಿಯಿಂದ ಬಣ್ಣದ ಕುಷ್ಟ ಎಂದೇ ಪರಿಚಿತರಾಗಿದ್ದ ಕೃಷ್ಣಯ್ಯ ಮಂಜಯ್ಯ ಶೆಟ್ಟಿ ಯಾನೆ ಕುಷ್ಟ ಗಾಣಿಗ ಇಂದು (6-12-2020) ಬೆಳಗಿನಜಾವ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ‌ ನಿಧನ ಹೊಂದಿದರು. ಅವರಿಗೆ‌ 89 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

ಕರ್ಕಿ, ಗುಂಡಬಾಳ, ಇಡಗುಂಜಿ, ಅಮೃತೇಶ್ವರೀ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ‌ಗೈದಿದ್ದರು. ಎಲ್ಲಾ ರೀತಿಯ ವೇಷಗಳನ್ನು ಮಾಡುತ್ತಿದ್ದ ಅವರು ಬಣ್ಣ ಮತ್ತು ಕಿರಾತ ವೇಷಗಳಲ್ಲಿವಿಶೇಷ ಸಿದ್ಧಿ ಪಡೆದಿದ್ದರು.

ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಾಹೀರಾತು 
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments