Saturday, January 18, 2025
Homeಯಕ್ಷಗಾನವಾಸುದೇವ ಸಾಮಗರ ಸಂಯಮಂ ತಂಡ (Vasudeva Samaga)

ವಾಸುದೇವ ಸಾಮಗರ ಸಂಯಮಂ ತಂಡ (Vasudeva Samaga)

ಯಕ್ಷಗಾನ ವೇಷಧಾರಿ, ಸಂಘಟಕ, ತಾಳಮದ್ದಳೆ ಅರ್ಥಧಾರಿ ಹೀಗೆ ಯಕ್ಷಗಾನದ ವಿವಿಧಂಗಗಳಲ್ಲಿ ತೊಡಗಿಸಿಕೊಂಡ ಎಂ.ಆರ್.ವಾಸುದೇವ ಸಾಮಗರು ಇಂದು ನಮ್ಮನ್ನಗಲಿದ್ದಾರೆ. ವಾಸುದೇವ ಸಾಮಗ ಎಂದ ಕೂಡಲೇ ನಮಗೆ ಫಕ್ಕನೆ ನೆನಪಾಗುವುದು ಅವರ ‘ಸಂಯಮಂ’ ಯಕ್ಷಗಾನ ತಾಳಮದ್ದಳೆ ತಂಡ. ಸಂಯಮಂ ಎಂದರೆ ‘ಸಂಚಾರಿ ಕ್ಷಗಾನ ಮಂಡಳಿ’.

ತನ್ನ ಅರ್ಥಗಾರಿಕೆಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ್ದ ವಾಸುದೇವ ಸಾಮಗರು ಸಂಯಮಂ ತಂಡ  ಕಟ್ಟಿದ ಬಗ್ಗೆ ಅಂದೊಮ್ಮೆ ವಿವರಿಸಿದ್ದರು.  ಕೆಲವೇ ಸಾವಿರಗಳನ್ನು ಸಂಪಾದಿಸಬೇಕಾದರೆ ಒಂದು ವರ್ಷದ ಕಾರ್ಪಣ್ಯದ ಬದುಕಿನ, ತಿರುಗಾಟ ಇವತ್ತಿನ ದಿನಗಳಲ್ಲಿ ಅಗತ್ಯವಿದೆಯೆ ಎಂಬ ಜಿಜ್ಞಾಸೆ ಅವರಿಗೆ ಕಾಡತೊಡಗಿತಂತೆ. ಇಷ್ಟು ಕಷ್ಟಪಡಬೇಕಾದ ಅಗತ್ಯವಿಲ್ಲ ಎಂಬ ಅವರ  ಯೋಚನೆಯೇ ‘ಸಂಯಮಂ’ ಎಂಬ ತಂಡ ಪ್ರಾರಂಭವಾಗಲು ಕಾರಣವಾಯಿತು.

ಮೊದಲು ಪ್ರಾಯೋಗಿಕವಾಗಿ ಮೂವತ್ತು ವರ್ಷಗಳ ಹಿಂದೆಯೇ ಒಮ್ಮೆ ಈ ತಾಳಮದ್ದಳೆ ತಂಡವನ್ನು ಪ್ರಾರಂಭಿಸಿದ್ದರು. ಅನುಭವದ ಕೊರತೆಯಿಂದ ಆಗ ಯಶಸ್ವಿಯಾಗಿರಲಿಲ್ಲ. ಆದರೆ ಈ ‘ಸಂಯಮಂ’ ತಂಡದ ವ್ಯವಸ್ಥಿತ ನಿರಂತರ ತಿರುಗಾಟಕ್ಕೆ 15 ವರ್ಷಗಳ ಇತಿಹಾಸವಿದೆ. ಎಲ್ಲಿಯೂ ಎಡರುತೊಡರುಗಳಿಲ್ಲದ ಪಯಣ ಈ ತಂಡದ್ದು.

ವಾಸುದೇವ ಸಾಮಗರ ತಂಡದ ಕಾರ್ಯಕ್ರಮಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೇವಲ ದೂರವಾಣಿಯ ಮೂಲಕ 100ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳು ಮಳೆಗಾಲದಲ್ಲಿ ನಿಗದಿಯಾಗುತ್ತಿತ್ತು. ಅದರಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಖಾಯಂ ನೆಲೆಯಲ್ಲಿ ಕಾಯ್ದಿರಿಸಲಾಗುತ್ತಿತ್ತು. ಅವರಿಗೆ ದಿನಾಂಕ ಮಾತ್ರ ನಿಗದಿ ಮಾಡುವ ಕೆಲಸ ಉಳಿದಿರುತ್ತಿತ್ತು.

ಯಕ್ಷಗಾನದ ವೈಭವೀಕರಣಕ್ಕಾಗಿ ಮಾತ್ರ ಇರುವ ತಂಡ ಇದು ಎಂದು ಸಾಮಗರು ಹೇಳುತ್ತಿದ್ದರು. ಅದಕ್ಕಾಗಿ ಸ್ಪಂದನಶೀಲ ಕಲಾವಿದರನ್ನು ಮಾತ್ರ ಸೇರಿಸಿ ‘ಸಂಯಮಂ’ ತಂಡದ ತಾಳಮದ್ದಳೆ ಕಾರ್ಯಕ್ರಮ ನಡೆಸುತ್ತಿದ್ದರು. ತಾಳಮದ್ದಳೆಯನ್ನು ಸ್ವಲ್ಪ Modify ಮಾಡಿ, ಶುಷ್ಕ ಪಾಂಡಿತ್ಯ ಪ್ರದರ್ಶನ ಮಾಡದೆ, Drama Sense ಇರುವ ಕಲಾವಿದರನ್ನು ಆರಿಸಿದ್ದರು.

ಸಂಯಮಂ ತಂಡದ ಕಾರ್ಯಕ್ರಮಗಳು ಎಷ್ಟು ಜನಪ್ರಿಯವಾಗಿದ್ದುವೆಂದರೆ ಕೇವಲ ಒಂದೊಂದು ಕಾರ್ಯಕ್ರಮಗಳಲ್ಲಿ ಅಷ್ಟಾಹ ಮತ್ತು ದಶಾಹಗಳು ಎಂದು ಕಾರ್ಯಕ್ರಮಗಳನ್ನು ಏರ್ಪಡಿಸುವವರು ಇದ್ದರು. (ಅಷ್ಟಾಹ = ಎಂಟು ದಿನಗಳ ನಿರಂತರ ಕಾರ್ಯಕ್ರಮ, ದಶಾಹ = ಹತ್ತು  ದಿನಗಳ ನಿರಂತರ ಕಾರ್ಯಕ್ರಮ) . ಸಂಯಮಂ  ತಂಡದಲ್ಲಿ ವಾಸುದೇವ ಸಾಮಗರ ಅರ್ಥಗಾರಿಕೆ ಭಾರೀ ಪ್ರಸಿದ್ಧಿಯನ್ನು ಪಡೆದಿತ್ತು. ಅವರದೇ ತಂಡದ ಕಾರ್ಯಕ್ರಮದಲ್ಲಿ ಅವರ ಉತ್ತರ ಕುಮಾರನ ಅರ್ಥಗಾರಿಕೆಯ ಒಂದು ಸಣ್ಣ ತುಣುಕಿನ ವೀಡಿಯೊ ನೋಡಿ.  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments