Saturday, January 18, 2025
Homeಯಕ್ಷಗಾನನವೆಂಬರ್ 7,8,12ರಂದು ಮೂರು ದಿನಗಳಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ (Karnataka yakshagana academy award...

ನವೆಂಬರ್ 7,8,12ರಂದು ಮೂರು ದಿನಗಳಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರದಾನ (Karnataka yakshagana academy award – 2019)

ಈಗಾಗಲೇ ಘೋಷಣೆಯಾಗಿರುವ  ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭವು ಮೂರು ದಿನಗಳಲ್ಲಿ ನಡೆಯಲಿದೆ.

07. 11. 2020 ಶನಿವಾರ ಸಂಜೆ 4 ಘಂಟೆಗೆ ಸರಿಯಾಗಿ ಶ್ರೀ ಕ್ಷೇತ್ರ ಕೊಲ್ಲೂರಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಈ ದಿನ ಪ್ರಶಸ್ತಿ ಸ್ವೀಕರಿಸುವವರು ಕೇಶವ ಶೆಟ್ಟಿಗಾರ್ (ಅಂಬಾತನಯ ಮುದ್ರಾಡಿ, ಪಾರ್ತಿಸುಬ್ಬ ಪ್ರಶಸ್ತಿ),  ಡಾ. ರಾಮಕೃಷ್ಣ ಗುಂದಿ (ಗೌರವ ಪ್ರಶಸ್ತಿ), ನಲ್ಲೂರು ಜನಾರ್ದನ ಆಚಾರ್, ಆರ್ಗೋಡು ಮೋಹನದಾಸ ಶೆಣೈ, ಮಹಮ್ಮದ್ ಗೌಸ್, ಮೂರೂರು ರಾಮಚಂದ್ರ ಹೆಗಡೆ, ಎಂ. ಎನ್, ಹೆಗಡೆ ಹಳವಳ್ಳಿ, ಹಾರಾಡಿ ಸರ್ವೋತ್ತಮ ಗಾಣಿಗ (ಎಲ್ಲರೂ ಯಕ್ಷಸಿರಿ ಪ್ರಶಸ್ತಿ).  

08. 11. 2020 ರವಿವಾರ ಸಂಜೆ 3 ಘಂಟೆಗೆ ಸರಿಯಾಗಿ ಮಂಗಳೂರಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಕಲಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಈ ದಿನ ಪ್ರಶಸ್ತಿ ಸ್ವೀಕರಿಸುವವರು ಡಾ. ಚಂದ್ರಶೇಖರ ದಾಮ್ಲೆ(ಗೌರವ ಪ್ರಶಸ್ತಿ) ಉಬರಡ್ಕ ಉಮೇಶ ಶೆಟ್ಟಿ, ಕುರಿಯ ಗಣಪತಿ ಶಾಸ್ತ್ರಿ(ಇಬ್ಬರೂ ಯಕ್ಷಸಿರಿ ಪ್ರಶಸ್ತಿ), ಹೊಸ್ತೋಟ ಮಂಜುನಾಥ ಭಾಗವತ, ಶ್ರೀ ಗುರುದೇವ ಪ್ರಕಾಶನ, ಒಡಿಯೂರು(ಪುಸ್ತಕ ಬಹುಮಾನ), ಕೃಷ್ಣಪ್ರಕಾಶ ಉಳಿತ್ತಾಯ (ಪುಸ್ತಕ ಬಹುಮಾನ).

12. 11. 2020 ಗುರುವಾರ ಸಂಜೆ 4 ಘಂಟೆಗೆ ಸರಿಯಾಗಿ ತುಮಕೂರಿನ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಈ ದಿನ ಪ್ರಶಸ್ತಿ ಸ್ವೀಕರಿಸುವವರು ಡಾ. ಆನಂದರಾಮ ಉಪಾಧ್ಯ, ಕೆ.ಸಿ.ನಾರಾಯಣ, ಡಾ. ಚಂದ್ರು ಕಾಳೇನಹಳ್ಳಿ(ಎಲ್ಲರೂ ಗೌರವ ಪ್ರಶಸ್ತಿ), ಬಿ. ರಾಜಣ್ಣ, ಎ.ಜಿ. ಅಶ್ವತ್ಥ ನಾರಾಯಣ(ಇಬ್ಬರೂ ಯಕ್ಷಸಿರಿ ಪ್ರಶಸ್ತಿ) ಮತ್ತು ಡಾ. ಚಿಕ್ಕಣ್ಣ ಯಣ್ಣೆಕಟ್ಟೆ (ಪುಸ್ತಕ ಬಹುಮಾನ). 

ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಸಚಿವರಾದ ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಬಿ.ವೈ. ರಾಘವೇಂದ್ರ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಜ್ಯೋತಿ  ಗಣೇಶ್, ಬಿ. ಎಂ. ಸುಕುಮಾರ ಶೆಟ್ಟಿಯವರಲ್ಲದೆ. ದಿವಾಕರ್ ಪಾಂಡೇಶ್ವರ್, ದಯಾನಂದ ಕತ್ತಲಸಾರ್, ರಾಜೇಶ್ ಜಿ, ಬಾ.ಹ.ರಮಾಕುಮಾರಿ, ನಿಜಲಿಂಗಪ್ಪ, ಹಾಗೂ ಎಂ.ಎ ಹೆಗಡೆ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ. 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments