Saturday, November 23, 2024
Homeಪುಸ್ತಕ ಮಳಿಗೆಆಟದ ಲೋಲಮಕ್ಕ - ಬದುಕಿನ ಹೆಗ್ಗುರುತುಗಳು (Atada Lolammakka)

ಆಟದ ಲೋಲಮಕ್ಕ – ಬದುಕಿನ ಹೆಗ್ಗುರುತುಗಳು (Atada Lolammakka)

 ಮಂಗಳೂರು ಪಚ್ಚನಾಡಿ ಬೆಟ್ಟು ಮನೆಯ ಶ್ರೀಮತಿ ಲೋಲಮ್ಮಕ್ಕ ಅವರು ಕಲಾವಿದೆಯಲ್ಲ. ಆದರೂ ಆಟದ ಲೋಲಮ್ಮಕ್ಕ ಎಂದೇ ಕರೆಸಿಕೊಂಡಿದ್ದರು. ಕಟೀಲು ಕ್ಷೇತ್ರದ ಭಕ್ತೆಯಾಗಿ 1968ರಿಂದ ತೊಡಗಿ ನಿರಂತರವಾಗಿ ನಲುವತ್ತು ವರ್ಷಗಳ ಕಾಲ ಶ್ರೀ ಕಟೀಲು ಮೇಳದ ಹರಕೆ ಬಯಲಾಟವನ್ನು ನಡೆಸುತ್ತಾ ಬಂದಿದ್ದರು.

ಅಲ್ಲದೆ ಬಯಲಾಟದ ಸಂದರ್ಭದಲ್ಲಿ ಕಲಾಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸುತ್ತಾ ಬಂದವರು. ತಮ್ಮ ದುಡಿಮೆಯ ಒಂದಂಶವನ್ನು ಯಕ್ಷಗಾನಕ್ಕಾಗಿ ವಿನಿಯೋಗಿಸಿದವರು. ದಾನಿಗಳಿಂದ ಸಂಗ್ರಹಿಸಿದ ಧನವನ್ನು ಯಕ್ಷಗಾನ ಸಂಬಂಧೀ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದ್ದರು. ಹಾಗಾಗಿ ಎಲ್ಲರೂ ಇವರನ್ನು ಆಟದ ಲೋಲಮ್ಮಕ್ಕ ಎಂದು ಹೇಳಿ ಗೌರವಿಸುತ್ತಿದ್ದರು. 2008ರಲ್ಲಿ ಇವರು ಕೀರ್ತಿಶೇಷರಾಗಿದ್ದರು. ಪ್ರಸ್ತುತ ಇವರ ಸೇವಾ ಚಟುವಟಿಕೆಗಳನ್ನು ಮಕ್ಕಳೂ ಮೊಮ್ಮಕ್ಕಳೂ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತೋಷದ ವಿಚಾರ.

ಬಂಧುಗಳ, ಅಭಿಮಾನಿಗಳ ಸಹಕಾರದಿಂದ ಲೋಲಮ್ಮ ಅವರ ಪುತ್ರ ಶ್ರೀ ರಾಮ ಅಮೀನ್ ಅವರು ‘ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ’ವನ್ನೂ ಸ್ಥಾಪಿಸಿರುತ್ತಾರೆ. ಆಟದ ಲೋಲಮ್ಮಕ್ಕ ಅವರ ಬದುಕು, ಸಾಧನೆಗಳ ಕುರಿತಾದ ಪುಸ್ತಕ ಇದು. ಪ್ರಕಾಶಕರು  ‘ಕೀರ್ತಿಶೇಷ ಲೋಲಮ್ಮ ಪಚ್ಚನಾಡಿ ಪ್ರತಿಷ್ಠಾನ’. ಸಂಪಾದಕರು ಡಾ. ದಿನಕರ ಎಸ್. ಪಚ್ಚನಾಡಿ ಅವರು. ಇದು 2016ರಲ್ಲಿ ಪ್ರಕಟವಾಗಿತ್ತು. ಮೊದಲಾಗಿ ಕೊಲ್ಯ ಶ್ರೀ ಶ್ರೀ ರಮಾನಂದ ಸ್ವಾಮೀಜಿ ಮತ್ತು ಶ್ರೀ ಕ್ಷೇತ್ರ ಕಟೀಲಿನ ಶ್ರೀ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ ಇವರುಗಳ ಅನುಗ್ರಹ ಸಂದೇಶಗಳನ್ನು ನೀಡಲಾಗಿದೆ.

ಮುನ್ನುಡಿಯನ್ನು ಬರೆದವರು ಡಾ. ಪಿ. ಸಂಜೀವ ದಂಡಕೇರಿ ಅವರು. ಶ್ರೀ ಜಯಂತ ಅಮೀನ್ ಪಚ್ಚನಾಡಿ, ಶ್ರೀಮತಿ ದೇವಕಿ ಪಚ್ಚನಾಡಿ, ಶ್ರೀರಾಮ ಅಮೀನ್ ಪಚ್ಚನಾಡಿ ಅವರುಗಳ ಲೇಖನವನ್ನೂ ನೀಡಲಾಗಿದ್ದು ‘ಸಂಪಾದಕರ ನುಡಿ’ ಎಂಬ ಶೀರ್ಷಿಕೆಯಡಿ ಡಾ. ದಿನಕರ್ ಎಸ್. ಪಚ್ಚನಾಡಿ ಅವರು ಲೇಖನವನ್ನು ಬರೆದಿರುತ್ತಾರೆ. ಬಳಿಕ ಶ್ರೀಮತಿ ಅವರ ಲೋಲಮ್ಮ ಅವರ ಬದುಕು, ಸಾಧನೆ, ಕಲಾಸೇವೆಗಳ ಮಾಹಿತಿಗಳನ್ನು ನೀಡಲಾಗಿದೆ. (ಅನುಕ್ರಮಣಿಕೆ ಒಂದು)

ಬಳಿಕ ಅನುಕ್ರಮಣಿಕೆ ಎರಡರಲ್ಲಿ ಡಾ. ಎನ್. ನಾರಾಯಣ ಶೆಟ್ಟಿ, ಕುಂಬಳೆ ಸುಂದರ ರಾವ್, ಭಾಸ್ಕರ ರೈ  ಕುಕ್ಕುವಳ್ಳಿ, ವಾಸುದೇವ ಕೊಟ್ಟಾರಿ, ನವನೀತ ಶೆಟ್ಟಿ ಕದ್ರಿ, ಚಂದ್ರಹಾಸ ಕೋಟೆಕಾರ್, ಕೆ. ಚಂದ್ರಶೇಖರ ಶೆಟ್ಟಿ, ವಿದ್ಯಾಧರ ಶೆಟ್ಟಿ ಪೊಸಕುರಾಲ್, ಶರತ್ ಕುಮಾರ್ ಕದ್ರಿ, ಜಿ. ಬಾಬಾ ಕಾಮತ್ ಪದವಿನಂಗಡಿ, ಪುರುಷೋತ್ತಮ ಕೊಟ್ಟಾರಿ, ಪ್ರಭಾಕರ ಕರ್ಕೇರ, ಶಿವಾನಂದ ಪೆರ್ಲಗುರಿ, ಶ್ರೀಮತಿ ತ್ರಿವೇಣಿ ಉದಯಪ್ರಕಾಶ್, ಶ್ರೀಮತಿ ಶೀಲಾಕ್ಷಿ ತಾರಾನಾಥ್ ಇವರುಗಳು ಆಟದ ಲೋಲಮ್ಮಕ್ಕನವರ ಬಗೆಗೆ ಬರೆದ ಲೇಖನಗಳಿವೆ. ಕಟೀಲು ಮೇಳದ ಸೇವಾಕರ್ತೆಯರಾಗಿದ್ದ ಶ್ರೀಮತಿ ಲೋಲಮ್ಮ (ಆಟದ ಲೋಲಮ್ಮಕ್ಕ) ಅವರ ಬದುಕಿನ ಕುರಿತಾದ ಪುಸ್ತಕವಿದು.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments