ಯಾಕೋ ಈ ಲವ್ ಜಿಹಾದ್ ಪ್ರಕರಣಗಳು ಕೊನೆಗೊಳ್ಳುತ್ತಿರುವ ಹಾಗೆ ಕಾಣಿಸುತ್ತಿಲ್ಲ ಇದೀಗ ಹರ್ಯಾಣದಿಂದ ಮತ್ತೊಂದು ಪ್ರಕರಣ ವರಿದಿಯಾಗುತ್ತಾ ಇದೆ. ತನ್ನ ಪದವಿ ಪರೀಕ್ಷೆ ಬರೆದು ಮುಗಿಸಿ ಹೊರ ಬರುತ್ತಿದ್ದ 21 ವರ್ಷದ ಯುವತಿಯೊಬ್ಬಳ ಮೇಲೆ ಗುಂಡಿನ ದಾಳಿ ನಡೆಸಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದೊಂದು ಮತಾಂತರ ಯತ್ನದ ಹತಾಶ ಕೃತ್ಯ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
ಹರಿಯಾಣಾದ ಫರೀದಾಬಾದ್ ನಲ್ಲಿ ಕೊನೆಯ ವರ್ಷದ ಬಿ.ಕಾಮ್ ವಿದ್ಯಾರ್ಥಿನಿ ಪರೀಕ್ಷೆ ಬರೆದು ಕಾಲೇಜಿನಿಂದ ಹೊರಗೆ ಬಂದು ಮನೆಯತ್ತ ತೆರಳುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ದುರುಳರು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಲು ಪ್ರಯತ್ನಿಸುತ್ತಾರೆ. ಅಪಹರಣ ಯತ್ನ ವಿಫಲವಾದಾಗ ಆರೋಪಿಗಳು ಗುಂಡು ಹಾರಿಸಿದ್ದ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾ ಇದೆ. ಈ ಸಂಬಂಧ ತೌಸೀಫ್ ಎನ್ನುವವನನ್ನು ಬಂಧಿಸಲಾಗಿದೆ.
“ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡುತ್ತಿದ್ದ. ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದಕ್ಕೆ ನಿರಾಕರಿಸಿದ್ದಕ್ಕೆ ಆರೋಪಿ ಅಪಹರಿಸಲು ಯತ್ನಿಸಿದಾಗ ಯುವತಿ ತಪ್ಪಿಸಿಕೊಂಡಾಗ ಗುಂಡು ಹಾರಿಸಿ ಕೊಲೆ ನಡೆಸಿದ್ದಾರೆ” ಎಂದು ಯುವತಿಯ ತಂದೆ ಹೇಳಿದ್ದಾರೆ. ಹಾಗೂ ತಾನು 2018ರಲ್ಲೇ ಆರೋಪಿಯ ವಿರುದ್ಧ ದೂರು ನೀಡಿದ್ದೆ ಎಂದೂ ಯುವತಿಯ ತಂದೆ ಹೇಳಿದ್ದಾರೆ.