Saturday, January 18, 2025
Homeಪುಸ್ತಕ ಮಳಿಗೆ'ತುಳು ಯಕ್ಷಗಾನ ಪುರ್ಸಂಗ ಬ್ರಹ್ಮೆ' - ಕೆ. ಅನಂತರಾಮ ಬಂಗಾಡಿ

‘ತುಳು ಯಕ್ಷಗಾನ ಪುರ್ಸಂಗ ಬ್ರಹ್ಮೆ’ – ಕೆ. ಅನಂತರಾಮ ಬಂಗಾಡಿ

ಶೀಷಿಕೆಯೇ ಸೂಚಿಸುವಂತೆ ಈ ಕೃತಿಯು ವಿದ್ವಾಂಸ, ಲೇಖಕ, ಅನೇಕ ತುಳು ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಶ್ರೀ ಕೆ. ಅನಂತರಾಮ ಬಂಗಾಡಿ ಇವರ ಕುರಿತಾಗಿ ಪ್ರಕಟವಾಗಿತ್ತು. ಈ ಪುಸ್ತಕವು ಓದುಗರ ಕೈ ಸೇರಿದ್ದು 2019ರಲ್ಲಿ. ಪ್ರಕಾಶಕರು ಸಂದೇಶ ಪ್ರಕಾಶನ, ಬಂಗಾಡಿ.

ಶ್ರೀ ಕೆ. ಅನಂತರಾಮ ಬಂಗಾಡಿ ಅವರು ಸುಮಾರು 27 ಕನ್ನಡ ಪ್ರಸಂಗಗಳನ್ನೂ ಬರೆದಿರುತ್ತಾರೆ. ಇವರು ಬರೆದ ತುಳು ಪ್ರಸಂಗಗಳು ಸುಮಾರು ಅರುವತ್ತೈದು. ಇವುಗಳಲ್ಲಿ ಒಟ್ಟು ಇಪ್ಪತ್ತೆರಡು ಪ್ರಸಂಗಗಳು ಪ್ರಕಟವಾಗಿವೆ. ಸಂಗ್ರಹ ಲೇಖನ – ಶ್ರೀ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅವರು ಮಾಹಿತಿಗಳನ್ನು ಸಂಗ್ರಹಿಸಿ ಈ ಕೃತಿಯು ಪ್ರಕಟವಾಗಲು ಶ್ರಮಿಸಿರುತ್ತಾರೆ.

ಖ್ಯಾತ ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ‘ಸುರುತ ಪೂವೆರಿ ನುಡಿಕಟ್ಟ್’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಶ್ರೀ ವಿಜಯ ಕುಮಾರ್ ಭಂಡಾರಿ, ಹೆಬ್ಬಾರಬೈಲು ಅವರು ‘ಬರೆಯಿನಾಯನ ರಡ್ಡ್ ಪಾತೆರ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು ‘ಉದಿಪು’ ಮತ್ತು ‘ಮದಿಪು’ ಎಂಬ ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಜಾಹೀರಾತು

ಎಲ್ಲಾ ವಿಚಾರಗಳನ್ನು ತುಳು ಭಾಷೆಯಲ್ಲಿ ನೀಡಲಾಗಿದ್ದು ಕೊನೆಯಲ್ಲಿ ಶ್ರೀ ಅನಂತರಾಮ ಬಂಗಾಡಿ ಅವರು ಪಡೆದ ಗೌರವ ಪ್ರಶಸ್ತಿ,ಸನ್ಮಾನಗಳು, ಅವರು ಬರೆದ ಯಕ್ಷಗಾನ ತುಳು ಪ್ರಸಂಗಗಳು, ಕನ್ನಡ ಪ್ರಸಂಗಗಳು, ಪ್ರಕಟಿತ ಪ್ರಸಂಗಗಳು, ಅವರು ಬರೆದ ಪ್ರಸಂಗಗಳನ್ನು ಪ್ರದರ್ಶಿಸಿದ ಮೇಳಗಳು, ಪೌರಾಣಿಕ ಪ್ರಸಂಗದ ಧ್ವನಿಸುರುಳಿಗಳು, ಹಾಸ್ಯ ಧ್ವನಿಸುರುಳಿ, ತುಳು ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳು, ತುಳು ಭಕ್ತಿಗೀತೆಗಳು, ಇವರ ಸಂಪಾದಕತ್ವದ ಸ್ಮರಣ ಸಂಚಿಕೆಗಳು, ಪ್ರಕಟಿತ ಇತಿಹಾಸ ಪುಸ್ತಕಗಳು ಮೊದಲಾದ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments