Saturday, November 23, 2024
Homeಪುಸ್ತಕ ಮಳಿಗೆಗೋಡೆ ಚಿತ್ತಾರ - ಗೋಡೆ ನಾರಾಯಣ ಹೆಗಡೆ ಬದುಕು, ಬಣ್ಣದ ಕಥನ 

ಗೋಡೆ ಚಿತ್ತಾರ – ಗೋಡೆ ನಾರಾಯಣ ಹೆಗಡೆ ಬದುಕು, ಬಣ್ಣದ ಕಥನ 

‘ಗೋಡೆ ಚಿತ್ತಾರ’ ಎಂಬ ಕೃತಿಯು ಬಡಗು ತಿಟ್ಟು ಯಕ್ಷಗಾನದ ಖ್ಯಾತ ಹಿರಿಯ ಕಲಾವಿದರಾದ ಶ್ರೀ ಗೋಡೆ ನಾರಾಯಣ ಹೆಗಡೆ ಅವರ ಬದುಕು, ಬಣ್ಣದ ಕಥನವಾಗಿ ಪ್ರಕಟವಾಗಿತ್ತು. ಇದು ಪ್ರಕಟವಾಗಿ ಓದುಗರ ಕೈ ಸೇರಿದ್ದು 2015ರಲ್ಲಿ. ಸಂಪಾದಕರು ಶ್ರೀ ಎಂ.ಕೆ ಭಾಸ್ಕರ ರಾವ್ ಅವರು. ಪ್ರಕಾಶಕರು ಪ್ರಮಾ ಪ್ರಕಾಶನ.

ಇದು ದ್ವಿತೀಯ ಮುದ್ರಣ. 2011ರಲ್ಲಿ ಮೊದಲು ಮುದ್ರಣವಾಗಿ ಪ್ರಕಟವಾಗಿತ್ತು. ಇದು ಪರಿಷ್ಕೃತ ಎರಡನೆಯ ಮುದ್ರಣ. ಶ್ರೀ ಜಿ. ಮೃತ್ಯುಂಜಯ ಅವರು ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಸಂಪಾದಕ ಶ್ರೀ ಎಂ.ಕೆ ಭಾಸ್ಕರ ರಾವ್ ಅವರು ‘ನಾಲ್ಕು ಮಾತು’ ಎಂಬ ಬರಹದಡಿ ತಮ್ಮ ಅನಿಸಿಕೆಗಳನ್ನು ತಿಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಅಲ್ಲದೆ ಕೃತಜ್ಞತೆ ಮತ್ತು ಎರಡನೆಯ ಮುದ್ರಣಕ್ಕೆ ಎರಡು ಮಾತು ಎಂಬ ಬರಹಗಳನ್ನೂ ನೀಡಿರುತ್ತಾರೆ. ಇದು ಒಟ್ಟು ನೂರಾ ಎಪ್ಪತ್ತೆರಡು ಪುಟಗಳಿಂದ ಕೂಡಿದೆ. ಶ್ರೀ ಗೋಡೆ ನಾರಾಯಣ ಹೆಗಡೆಯವರ ಬಗೆಗೆ ಮೊದಲೊಂದು ಲೇಖನವನ್ನು ಬರೆಯಲು ಅವಕಾಶವಾಗಿತ್ತು. ಅವರ ಕುರಿತಾದ ಪುಸ್ತಕ ಪರಿಚಯವನ್ನು ಮಾಡುವರೆ ಅವಕಾಶವಾದುದಕ್ಕೆ ಸಂತೋಷಪಡುತ್ತೇನೆ.

ಜಾಹೀರಾತು

ಈ ಪುಸ್ತಕದಲ್ಲಿ, ಕೌರವ ಕೌರವ, ಬಯಸಿ ಬಂದ ಭಾಗ್ಯವಲ್ಲ, ಬ್ರಹ್ಮ ಬ್ರಹ್ಮ ಬ್ರಹ್ಮ , ಅಕ್ರೂರನಿಗೂ ಅಸ್ತಿತ್ವ, ಮಲೆನಾಡಿನ ಮಾಲೆಯಿಂದ, ಉತ್ತರ ಕಾಣದ ಪ್ರಶ್ನೆ, ಋತುಪರ್ಣನಿಗೆ ಹೊಸ ಆಯಾಮ, ಲಕ್ಷ್ಯ-ಅಲಕ್ಷ್ಯ, ಮೂರು ತಾಸಿನ ಆಟಕ್ಕೆ ಶ್ರೀಕಾರ, ಯಕ್ಷಗಾನ-ನಾಟಕ-ತಾಳಮದ್ದಳೆ, ಬಡ ಎತ್ತಿನ ಮೇಲೆ ಬೆಟ್ಟ, ಕೈಗೆ ಬಂದಿದ್ದರೂ ದಕ್ಕಲಿಲ್ಲ, ಇಡಗುಂಜಿ ಮೇಳಕ್ಕೆ ಕರೆಯು, ಹೀಗೊಂದು ಕಹಿ ಅಧ್ಯಾಯ, ಕೆರೆಮನೆ ದೂತ-ಅಮೃತೇಶ್ವರೀ ಹತ್ತಿರ, ಸನ್ಮಾನ-ಅನುಮಾನ-ಅವಮಾನ, ಆರಂಭದ ನೋವು-ಕೊನೆಯ ಸಂತೃಪ್ತಿ, ಗಣ್ಯರ ದೃಷ್ಟಿ-ಗೋಡೆ ಪಾತ್ರ ಸೃಷ್ಟಿ, ಮರೆಯಲಾಗದ ಪ್ರಸಂಗಗಳು, ಸಂದ ಪ್ರಶಸ್ತಿಗಳು, ಗೋಡೆ ಚಿತ್ತಾರದ ಮೊದಲ ಮುದ್ರಣದ ಅನಾವರಣ, ಗೋಡೆ ಚಿತ್ತಾರ-ಒಂದಿಷ್ಟು ಅನಿಸಿಕೆ, ಚಿತ್ರಸಂಪುಟ ಎಂಬ ವಿಚಾರಗಳಡಿ ಮಾಹಿತಿಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments