Saturday, January 18, 2025
Homeಪುಸ್ತಕ ಮಳಿಗೆರಸ ರಾಮಾಯಣ - ರಾಮಾಯಣ ರಸಪ್ರಶ್ನೆಗಳು (ಶ್ರೀ ಸುಬ್ರಾಯ ಸಂಪಾಜೆ) Subraya Sampaje

ರಸ ರಾಮಾಯಣ – ರಾಮಾಯಣ ರಸಪ್ರಶ್ನೆಗಳು (ಶ್ರೀ ಸುಬ್ರಾಯ ಸಂಪಾಜೆ) Subraya Sampaje

‘ರಸ ರಾಮಾಯಣ’ ಎಂಬ ಈ ಕೃತಿಯ ಲೇಖಕರು ಶ್ರೀ ಸುಬ್ರಾಯ ಸಂಪಾಜೆ ಅವರು. ಶ್ರೀಯುತರು ಪ್ರಸ್ತುತ ಮಡಿಕೇರಿ ಆಕಾಶವಾಣಿಯ ಹಿರಿಯ ಉದ್ಘೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರು ವಿ.ವಿ.ಯ ಸ್ನಾತಕೋತ್ತರ ಪಧವೀಧರರಾಗಿ ಕೆಲವು ವರ್ಷಗಳ ಕಾಲ ಉಡುಪಿ ಎಂ.ಜಿ.ಎಂ ಕಾಲೇಜು ಮತ್ತು ಕೋಟ ವಿವೇಕ ಕಾಲೇಜಿನಲ್ಲಿ ಉಪಾನ್ಯಾಸಕರಾಗಿಯೂ ಸೇವೆ ಸಲ್ಲಿಸಿದವರು. ಶ್ರೀಯುತರು ಯಕ್ಷಗಾನದ ಶ್ರೇಷ್ಠ ಭಾಗವತರಾಗಿಯೂ ಕಲಾಭಿಮಾನಿಗಳಿಗೆ ಪರಿಚಿತರು.

ಇದು ದ್ವಿತೀಯ ಮುದ್ರಣ (2018 ಆಗಸ್ಟ್). ಮೊದಲ ಮುದ್ರಣ 2018 ಮಾರ್ಚ್ ತಿಂಗಳಿನಲ್ಲಿ. ಮೊದಲ ಮುದ್ರಣದ ಪುಸ್ತಕಗಳೆಲ್ಲಾ ಓದುಗರ ಕೈ ಸೇರಿ ಕೇವಲ ಐದು ತಿಂಗಳಿನಲ್ಲಿ ಮರುಮುದ್ರಣಗೊಂಡಿತ್ತು. ‘ಪುರಾಣಯಾನ’ ಎಂಬುದು ಶ್ರೀ ಸುಬ್ರಾಯ ಸಂಪಾಜೆ ಅವರ ಮೊದಲ ಕೃತಿ. ‘ರಸ ರಾಮಾಯಣ’ ಎಂಬ ಈ ಕೃತಿಯ ಪ್ರಕಾಶಕರು ವಿಟ್ಲದ ಸಧಭಿರುಚಿ ಪ್ರಕಾಶನದ ಶಾಂತಾ ಎಸ್.ಎನ್. ಭಟ್ಟ ಅವರು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ವಿದ್ವಾಂಸರೂ ಖ್ಯಾತ ತಾಳಮದ್ದಳೆ ಅರ್ಥಧಾರಿಗಳೂ ಆಗಿರುವ ವಿದ್ವಾನ್ ಕೆರೇಕೈ ಉಮಕಾಂತ ಭಟ್ಟ ಅವರು.

ಲೇಖಕ ಶ್ರೀ ಸುಬ್ರಾಯ ಸಂಪಾಜೆ ಅವರು ‘ಅರಿಕೆ’ ಎಂಬ ತಮ್ಮ ಬರಹದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯ ಬರಹದಲ್ಲಿ ಶಾಂತಾ ಎಸ್. ಎನ್. ಭಟ್ಟ ಅವರು ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ. ಪುಸ್ತಕದ ಹೊರ ಆವರಣದಲ್ಲಿ ಲೇಖಕ, ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಶ್ರೀ ರಾಧಾಕೃಷ್ಣ ಕಲ್ಚಾರ್ ಅವರ ಲೇಖನವನ್ನು ನೀಡಲಾಗಿದೆ. ಈ ಕೃತಿಯಲ್ಲಿ ಶ್ರೀ ಸುಬ್ರಾಯ ಸಂಪಾಜೆ ಅವರು ರಾಮಾಯಣದ ಏಳು ಕಾಂಡಗಳಿಗೆ ಸಂಬಂಧಿಸಿ ಸಾವಿರದ ಮುನ್ನೂರ ಎಪ್ಪತ್ತೇಳು ಪ್ರಶ್ನೆಗಳನ್ನು ಉತ್ತರ ಸಹಿತ ನೀಡಿರುತ್ತಾರೆ. ಉತ್ತಮ ಮಾಹಿತಿಗಳನ್ನೊಳಗೊಂಡ ಸಂಗ್ರಹ ಯೋಗ್ಯವಾದ ಕೃತಿಯಿದು. ಶ್ರೀ ಸುಬ್ರಾಯ ಸಂಪಾಜೆ ಅವರಿಗೆ ಅಭಿನಂದನೆಗಳು. ಸಾಹಿತ್ಯ ಸೇವೆ ಮತ್ತು ಕಲಾಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಶುಭ ಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments