ಸಿಂಹ ರಾಶಿ – ನವೆಂಬರ್ 2020
ಸಿಂಹ ರಾಶಿಯವರಿಗೆ ನವೆಂಬರ್ ತಿಂಗಳು ಸಾಕಷ್ಟು ಉತ್ತಮ ಫಲಗಳನ್ನು ಪಡೆಯುವ ಅವಕಾಶಗಳಿವೆ. ಹಾಗಿದ್ದೂ ಅಂತಹ ಅವಕಾಶಗಳನ್ನು ಸದುಪಯೋಗಿಸಿಕೊಳ್ಳುವ ಜಾಣ್ಮೆ ನಿಮ್ಮಲ್ಲಿರಬೇಕು. ಈ ತಿಂಗಳಲ್ಲಿ ಭೂಮಿ, ಮನೆ, ಆಸ್ತಿ ಮಾಡಿಕೊಳ್ಳುವ ಯೋಗಗಳಿವೆ. ಕೆಲವರಿಗೆ ಮಾಡಿದ ಸತ್ಕಾರ್ಯಗಳಿಗೆ, ಕಠಿಣ ಶ್ರಮಕ್ಕೆ ಪ್ರತಿಫಲ ದೊರಕಬಹುದು. ಸಾರ್ವಜನಿಕ ವಲಯದಲ್ಲಿ ಗೌರವವೂ ದೊರಕಬಹುದು. ಆದರೆ ನಿಮ್ಮ ಆತುರ, ಗಡಿಬಿಡಿಯ ಸ್ವಭಾವಗಳಿಂದಾಗಿ ಮನೆಯಲ್ಲಿ ಶಾಂತಿಯಿಂದ ಇರಲು ಅಸಾಧ್ಯವಾಗಬಹುದು.

ಕೆಲವರಿಗೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಉಂಟಾಗಬಹುದು. ಸಾಕಷ್ಟು ಸಂಪಾದನೆಯಿದ್ದರೂ ಅದರ ಸದ್ವಿನಿಯೋಗ ಮಾಡದಿದ್ದರೆ ಅಥವಾ ಬೇಡವಾದ ಖರ್ಚುಗಳನ್ನು ಮಾಡಿದರೆ ಹಣ ಉಳಿಯುವುದು ಕಷ್ಟ. ಹಣದ ವಿಚಾರದಲ್ಲಿ ಬಹಳಷ್ಟು ಜಾಗ್ರತೆ ಅವಶ್ಯ. ಸಾಲ ಕೊಟ್ಟ ದುಡ್ಡಿನ ವಸೂಲಾತಿ ಕಷ್ಟವಾಗಬಹುದು.

ಮನೆಯಲ್ಲಿ ಮಂಗಲಕಾರ್ಯಗಳು ನಡೆಯಬಹುದು. ಸ್ತ್ರೀ ಮೂಲದಿಂದ ಧನಲಾಭ ಉಂಟಾಗಬಹುದು. ಮನೆಯವರ ಆರೋಗ್ಯದಲ್ಲಿ ಹೆಚ್ಚುಕಡಿಮೆ ಉಂಟಾಗಬಹುದು. ನೀವು ಮನೆಯವರೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಪ್ರಯತ್ನಿಸಿ ಮತ್ತು ಕುಟುಂಬ ಸದಸ್ಯರೊಂದಿಗೆ ಹೊಂದಾಣಿಕೆಯಿಂದಿರುವುದರಿಂದ ನಿಮಗೆ ಸಾಕಷ್ಟು ಪ್ರಯೋಜನಗಳು ಉಂಟಾಗಲಿದೆ.