ಮಿಥುನ ರಾಶಿ – ನವೆಂಬರ್ 2020
ಮಿಥುನ ರಾಶಿಯವರಿಗೆ ನವೆಂಬರ್ ತಿಂಗಳಿನಲ್ಲಿ ಹಣಕಾಸಿನ ತೊಂದರೆ ಎದುರಾಗುವ ಸಾಧ್ಯತೆಯಿದೆ. ನಿಮ್ಮ ಖರ್ಚು ವೆಚ್ಚಗಳನ್ನು ನೀವು ನಿಯಂತ್ರಣದಲ್ಲಿಡದಿದ್ದರೆ ಸ್ವಲ್ಪ ಮಟ್ಟಿಗೆ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ. ವ್ಯಾಪಾರವ ವ್ಯವಹಾರಗಳು ಸಾಮಾನ್ಯ ಗತಿಯಲ್ಲಿ ಸಾಗುತ್ತಿರುವುದಾದರೂ ಆದಾಯಕ್ಕಿಂತ ಖರ್ಚು ವೆಚ್ಚಗಳೇ ಹೆಚ್ಚಾಗುತ್ತವೆ.

ವಿದ್ಯಾಭ್ಯಾಸ, ಇಂಟರ್ವ್ಯೂ ಗಳಲ್ಲಿ ಯಶಸ್ಸು ಉಂಟಾಗುತ್ತದೆ. ಮನೆಯ ಅಥವಾ ಕುಟುಂಬದ ಸದಸ್ಯರ ನಡುವೆ ಸಮಸ್ಯೆಗಳು ತಲೆದೋರುವ ಸಾಧ್ಯತೆಯಿದ್ದು ತಾಳ್ಮೆ ವಹಿಸುವುದು ಉತ್ತಮ.

ಯಾವುದೇ ವಿವಾದಗಳಿದ್ದರೂ ಸದಸ್ಯರೆಲ್ಲರೂ ಕುಳಿತು ಮಾತನಾಡಿ ಸಮಸ್ಯೆಗಳನ್ನು ಬಗೆಹರಿಸುವುದು ಉತ್ತಮ. ಈ ರಾಶಿಯ ವಿವಾಹಿತರಿಗೆ ಈ ತಿಂಗಳು ಉತ್ತಮವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನ ನೆಮ್ಮದಿಯಿಂದ ಕೂಡಿರುತ್ತದೆ. ಅರೋಗ್ಯ ವಿಷಯದಲ್ಲಿ ಹೇಳುವುದಾದರೆ ಮೂಳೆಗಳಿಗೆ ಸಂಬಂಧಪಟ್ಟ ತೊಂದರೆಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸುವುದು ಉತ್ತಮ.