ಕರ್ಕಾಟಕ ರಾಶಿ ನವೆಂಬರ್ 2020
ಈ ರಾಶಿಯವರಿಗೆ ಈ ತಿಂಗಳು ಸ್ವಲ್ಪ ಅನುಕೂಲವಾಗಿರುತ್ತದೆ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮವಾಗಿದ್ದರೂ ಅದನ್ನು ಉಳಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ನಿಮ್ಮ ಮನಸಿನಲ್ಲಿ ಹೊಸ ಹೊಸ ಯೋಚನೆಗಳು ಬರುತ್ತವೆ.

ಆರ್ಥಿಕ ಅನುಕೂಲವು ನಿಮ್ಮನ್ನು ಹೊಸ ವ್ಯವಹಾರಕ್ಕೆ ಇಳಿಯುವಂತೆ ಪ್ರೇರೇಪಿಸಬಹುದು. ಆದರೆ ಯಾವುದೇ ಹೊಸತನ್ನು ಆರಂಭಿಸುವ ಮೊದಲು ನಿಮಗದು ಸಾಧಕವಾಗುವಂತೆ ಪ್ರಯತ್ನಿಸಿ. ಅರೋಗ್ಯ ಸಮಸ್ಯೆ ಅಷ್ಟಾಗಿ ಕಾಡದಿದ್ದರೂ ನರದ ಸಂಬಂಧೀ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸಿ. ಒಂದು ರೀತಿಯ ಆಲಸ್ಯ ನಿಮ್ಮನ್ನು ಕಾಡುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಹೆಚ್ಚಿನ ಪ್ರಯತ್ನ ಪಡುವುದರಿಂದ ಯಶಸ್ಸು ಸಿಗಲು ಸಾಧ್ಯ.

ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರುವ ಕಾರಣ ಹೂಡಿಕೆ ಮಾಡುವತ್ತ ನಿಮ್ಮ ಮನಸ್ಸು ವಾಲಬಹುದಾದರೂ ಸರಿಯಾದ ಲಾಭದಾಯಕ ಸಂಸ್ಥೆಯಲ್ಲಿ ಹೂಡಿಕೆ ಮಾಡಿ. ಮಕ್ಕಳ ಕಡೆ ಗಮನ ಅಗತ್ಯ. ಕೈಯಲ್ಲಿ ಹಣವಿದೆ ಎಂದು ಕೇಳಿದ್ದನ್ನೆಲ್ಲ ಕೊಡಿಸೋಕೆ ಹೋಗಬೇಡಿ. ಈ ತಿಂಗಳು ಕುಟುಂಬದೊಂದಿಗೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ.