Sunday, January 19, 2025
Homeಯಕ್ಷಗಾನಹೂವಿನ ಕೋಲು ನೇರಪ್ರಸಾರ - ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ

ಹೂವಿನ ಕೋಲು ನೇರಪ್ರಸಾರ – ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ

ಇಂದು 22.10.2020ರಂದು ಸಂಜೆ 5.30 ಘಂಟೆಗೆ ಸರಿಯಾಗಿ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿಯವರು ಪ್ರಸ್ತುತಪಡಿಸುವ ಬಡಗು ತಿಟ್ಟು ಯಕ್ಷಗಾನದ ಅಂಗವಾದ ‘ಹೂವಿನ ಕೋಲು’ ಪ್ರದರ್ಶನ ನಡೆಯಲಿದೆ.

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಸಂಯೋಜಿಸಿದ ‘ಜಾಂಬವತಿ ಕಲ್ಯಾಣ’ ಪ್ರಸಂಗವನ್ನು ಐರೋಡಿ ರಾಜಶೇಖರ ಹೆಬ್ಬಾರ ಅವರು ನಿರ್ದೇಶಿಸಲಿದ್ದಾರೆ. ಭಾಗವತರಾಗಿ ನೀಲಾವರ ಕೇಶವ ಆಚಾರ್ ಮತ್ತು ಮದ್ದಳೆಯಲ್ಲಿ ರಾಘವೇಂದ್ರ ಹೆಗಡೆ ಭಾಗವಹಿಸಲಿದ್ದಾರೆ. ಜಾಂಬವನಾಗಿ ಸೃಜನ್ ಗುಂಡ್ಮಿ, ಕೃಷ್ಣನಾಗಿ ಸಚಿನ್ ಆಚಾರಿ, ಜಾಂಬವತಿಯಾಗಿ ವಿಭವನ್ ಹೇರ್ಳೆ ಭಾಗಹಿಸುತ್ತಾರೆ. ನಶಿಸಿಹೋಗುತ್ತಿರುವ ಈ ಕಲಾಪ್ರಕಾರವನ್ನು ಉಳಿಸುವಲ್ಲಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಈ ಪ್ರಯತ್ನ ಸ್ತುತ್ಯರ್ಹ.  ನೇರ ಪ್ರಸಾರದ ಲಿಂಕ್ ಕೆಳಗಡೆ ಇದೆ.  ಸಂಜೆ 5.30ಕ್ಕೆ ಲಿಂಕ್ ಕ್ಲಿಕ್ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments