ಯಕ್ಷಗಾನ ಕಲಾಕೇಂದ್ರ (ರಿ) ಹಂಗಾರಕಟ್ಟೆ – ಐರೋಡಿ ಇವರು ಸಂಯೋಜಿಸುತ್ತಿರುವ ದಿ| ಸದಾನಂದ ಹೆಬ್ಬಾರ ಸಂಸ್ಮರಣಾ ಕಾರ್ಯಕ್ರಮ ಮತ್ತು ಸದಾನಂದ ಪ್ರಶಸ್ತಿ ಪ್ರಧಾನ ಸಮಾರಂಭ-2020 ಕಾರ್ಯಕ್ರಮಗಳು ಇದೇ ಬರುವ ದಿನಾಂಕ 25.10.2020ರ ಆದಿತ್ಯವಾರ ಸಂಜೆ 5 ಘಂಟೆಗೆ ಉಡುಪಿಯ ಅಂಬಾಗಿಲು ಎಂಬಲ್ಲಿರುವ ವಾಸುಕೀ ನಗರದಲ್ಲಿ ನಡೆಯಲಿದೆ.
ಈ ಬಾರಿಯ ಸದಾನಂದ ಪ್ರಶಸ್ತಿಗೆ ಯಕ್ಷಗಾನ ವಿದ್ವಾಂಸರಾದ ಶ್ರೀ ಗುಂಡ್ಮಿ ಸದಾನಂದ ಐತಾಳರು ಆಯ್ಕೆಯಾಗಿದ್ದಾರೆ ಎಂದು ಕಲಾಕೇಂದ್ರದ ಪ್ರಕಟಣೆ ತಿಳಿಸಿದೆ.
