‘ಕಾರಂತ ಕಿರಣ’ ಎಂಬ ಈ ಕೃತಿಯು ಕೋಟ ಶಿವರಾಮ ಕಾರಂತರ ಕುರಿತಾದ ವಿಚಾರಗಳನ್ನು ತುಂಬಿಕೊಂಡಿರುವ ಪುಸ್ತಕವು. ಈ ಹೊತ್ತಗೆಯು ಪ್ರಕಟವಾದುದು 2004ರಲ್ಲಿ. ಪ್ರಕಾಶಕರು ಬಿ.ಎಂ. ಶ್ರೀಕಂಠಯ್ಯ ಸ್ಮಾರಕ ಪ್ರತಿಷ್ಠಾನ, ಬೆಂಗಳೂರು. ಈ ಪ್ರತಿಷ್ಠಿತ ಪ್ರತಿಷ್ಠಾನವನ್ನು ಎಂ.ವಿ ಸೀತಾರಾಮಯ್ಯನವರು ತಮ್ಮ ಆಪ್ತರ ಸಹಕಾರದಿಂದ ಸ್ಥಾಪಿಸಿದರೆಂದೂ, 1979ರಲ್ಲಿ ಬಿ.ಎಂ.ಶ್ರೀ ಅವರ ಶಿಷ್ಯರಾದ ರಾಷ್ಟ್ರಕವಿ ಕುವೆಂಪು ಅವರು ಉದ್ಘಾಟಿಸಿದರೆಂದೂ ಪ್ರಧಾನ ಸಂಪಾದಕೀಯ ಬರಹದಲ್ಲಿ ಶ್ರೀ ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು ತಿಳಿಸಿರುತ್ತಾರೆ.
ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ರಜತೋತ್ಸವ ಗ್ರಂಥಮಾಲೆಯಾಗಿ ‘ಕಾರಂತ ಕಿರಣ’ ಎಂಬ ಈ ಕೃತಿಯು ಓದುಗರ ಕೈ ಸೇರಿತ್ತು. ಈ ಗ್ರಂಥಮಾಲೆಯ ಸಂಪಾದಕರು ಚಿ ಶ್ರೀನಿವಾಸ ರಾಜು, ನಾ. ಗೀತಾಚಾರ್ಯ, ಎಸ್. ಶಿವಲಿಂಗಯ್ಯ ಅವರುಗಳು. ನಾ. ಗೀತಾಚಾರ್ಯರು ಸಂಪಾದಕರ ಪರವಾಗಿ ಸಂಪಾದಕೀಯ ಲೇಖನವನ್ನು ಬರೆದಿರುತ್ತಾರೆ. ಅಲ್ಲದೆ ಕಾರಂತರ ಬಗೆಗೆ ‘ಕಡಲ ತೀರದ ಭಾರ್ಗವ’ ಎಂಬ ಕವನವನ್ನೂ ಬರೆದಿರುತ್ತಾರೆ.
ಗ್ರಂಥಮಾಲೆಯು ಆರು ಲೇಖನಗಳನ್ನು ಹೊಂದಿದ್ದು ಅವುಗಳು ಕೋಟ ಶಿವರಾಮ ಕಾರಂತ (ಜೀವನ ಪಥ), ಡಾ. ಕಾರಂತರು ಮತ್ತು ಯಕ್ಷಗಾನ, ಕಾರಂತರ ವಿಜ್ಞಾನ ಪ್ರಪಂಚ, ಪತ್ರಿಕೋದ್ಯಮ ರಾಜಕಾರಣ ಸಾಮಾಜಿಕ ಚಟುವಟಿಕೆಗಳಲ್ಲಿ ಶಿವರಾಮ ಕಾರಂತರು, ಕಾರಂತರ ಸಿರಿಗನ್ನಡ ಅರ್ಥಕೋಶ, ಕಾರಂತರು ಮತ್ತು ಸಿನಿಮಾ.
ಲೇಖನಗಳನ್ನು ಬರೆದವರು ಕ್ರಮವಾಗಿ ಎಸ್. ವಿ. ಶ್ರೀನಿವಾಸ ರಾವ್, ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್, ಟಿ.ಆರ್. ಅನಂತರಾಮು, ಈಶ್ವರ ದೈತೋಟ, ಪ್ರೊ| ಜಿ. ಅಶ್ವತ್ಥನಾರಾಯಣ, ಗಿರೀಶ್ ಕಾಸರವಳ್ಳಿ, ಬಳಿಕ ಅನುಬಂಧ ಎಂಬ ವಿಭಾಗದಲ್ಲಿ ‘ಕಾರಂತರ ಕಿರಣ’ – ಕಾರ್ಯಕ್ರಮ ವಿವರ, ನಿಧನಾ ನಂತರ ಲೇಖನ ಸೂಚಿ ಮತ್ತು ಲೇಖಕರ ವಿಳಾಸಗಳನ್ನು ನೀಡಲಾಗಿದೆ.
ಬರಹ: ರವಿಶಂಕರ್ ವಳಕ್ಕುಂಜ